Maja Maadi
Please Register/Login to the forum.
You get access to many more maja on Login!
Keep posting.. MAJA MAADI

--------------------------------------------------------------------
ದಯಮಾಡಿ ಈ ಬಳಗಕ್ಕೆ ನೊಂದಯಿಸಿಕೊಳ್ಳಿ!!
ಮಜಾ ಮಾಡಿ ನೊಂದಣಿಯ ಜೊತೆ,
ಹಲವಾರು ವರ್ಗಗಳಿಗೆ ಪ್ರವೇಶ ಸಿಗುತದೆ.
ಪೊಸ್ಟ್ ಮಾಡುತಲಿರಿ... ಮಜಾ ಮಾಡುತಲಿರಿ!

Beauty tips for girls

Post new topic   Reply to topic

Page 1 of 3 1, 2, 3  Next

View previous topic View next topic Go down

Beauty tips for girls

Post by rockinggirl.mamtha on Thu 10 Sep - 14:23:48

Hi girls

yarge yav yav Beauty tips gotho ella tips illi share madkoli plzzzzzz

rockinggirl.mamtha
VIP
VIP

Female
Number of posts: 471
Age: 17
Profession: student
MAJA POINTS MAJA POINTS: 3478
Registration date: 2009-07-03

View user profile

Back to top Go down

Re: Beauty tips for girls

Post by kumars on Thu 10 Sep - 14:50:36

Boys share maad bahuda ???


.
.
.
.
.
.
.


We make them cry who care for us.
We cry for those who never care for us.
We care for those who will never cry for us.
This is the truth of life, it’s strange but true.
Once you realize this,
it’s never too late to change.......

kumars
VIP
VIP

Male
Number of posts: 4019
Age: 26
Profession: SSE
MAJA POINTS MAJA POINTS: 7739
Registration date: 2008-03-04

View user profile

Back to top Go down

Re: Beauty tips for girls

Post by rockinggirl.mamtha on Sat 12 Sep - 12:07:31

ok maadi....... Very Happy

rockinggirl.mamtha
VIP
VIP

Female
Number of posts: 471
Age: 17
Profession: student
MAJA POINTS MAJA POINTS: 3478
Registration date: 2009-07-03

View user profile

Back to top Go down

Re: Beauty tips for girls

Post by rockinggirl.mamtha on Mon 14 Sep - 11:02:53

ಕಾಫಿ ಕುಡಿದು ಸ್ಲಿಮ್ ಆಗಿ!


ಬೆಳಗ್ಗೆ ಏಳುವ ಮೊದಲೇ ಕುಡಿಯುವ ಕಾಫಿಗೆ ಬೆಡ್ ಕಾಫಿ ಎಂಬ ಆಪ್ಯಾಯಮಾನ ಹೆಸರಿನೊಂದಿಗೆ, ಕಾಫಿ ಎಂಬುದು ಜನ ಜೀವನದಲ್ಲಿ ಹಾಸುಹೊಕ್ಕಾಗಿದೆ ಎಂಬುದು ವೇದ್ಯವಾಗುತ್ತದೆ. ಬೆಳಗ್ಗೆ ಅಥವಾ ಸಂಜೆಯ ಉಪಾಹಾರ ಸೇವನೆಗೆ ಹೋಗಬೇಕಿದ್ದರೆ, "ಕಾಫಿಗೆ ಹೋಗೋಣ" ಅಂತಲೇ ಹೇಳುವ ಪರಿಪಾಠವೂ ಇದೆ.

ನಮ್ಮನ್ನು ಹಾಸಿಗೆಯಿಂದ ಎಬ್ಬಿಸುವ ಈ ಕಾಫಿಯು ಕ್ಯಾನ್ಸರ್ ಸಾಧ್ಯತೆಯ ಪ್ರಮಾಣವನ್ನು ತಗ್ಗಿಸುತ್ತದೆ ಎಂಬ ಬಗ್ಗೆ ಈಗಾಗಲೇ ವೈದ್ಯಕೀಯ ಜಗತ್ತಿನ ಸಂಶೋಧನೆಯೊಂದು ವರದಿ ಮಾಡಿದೆ. ಇದೇ ರೀತಿ ಆರೋಗ್ಯದ ಮೇಲೆ ಕಾಫಿಯ ಪೂರಕತೆ ಮತ್ತು ಮಾರಕತೆ ಕುರಿತು ಚರ್ಚೆಗಳು ನಡೆಯುತ್ತಿರುವಂತೆಯೇ, ಕಾಫಿ ಸೇವನೆಯು ನಿಮ್ಮನ್ನು ಸ್ಲಿಮ್ ಆಗಿಸಲು ಕೂಡ ಸಹಕಾರಿಯಾಗುತ್ತದೆ ಎಂದು ವರದಿಯೊಂದು ತಿಳಿಸುತ್ತದೆ.

ಅಥೆನ್ಸ್‌ನ ಜಾರ್ಜಿಯಾ ವಿಶ್ವವಿದ್ಯಾನಿಲಯದ ಸಂಶೋಧಕರು ತಮ್ಮ ಪ್ರಯೋಗಗಳ ಮೂಲಕ ಇದನ್ನು ಕಂಡುಕೊಂಡಿದ್ದು, ದೈನಂದಿನ ವ್ಯಾಯಾಮ ಮಾಡುವ ವೇಳೆ ಎರಡು ಕಪ್ ಕಾಫಿ ಸೇವಿಸಿದಲ್ಲಿ, ಅದು ವ್ಯಾಯಾಮದಿಂದ ಉಂಟಾಗುವ ಸ್ನಾಯು ನೋವನ್ನು ಅರ್ಧಕ್ಕರ್ಧ ಕಡಿಮೆಗೊಳಿಸುತ್ತದೆ ಎಂದಿದ್ದಾರೆ. ಇದಕ್ಕೆ ಕಾರಣ, ಕಾಫಿಯಲ್ಲಿರುವ ಕೆಫಿನ್ ಅಂಶ.

ಕಾಲೇಜು ತರುಣಿಯರ ಮೇಲೆ ಈ ಪ್ರಯೋಗ ಮಾಡಲಾಗಿತ್ತು. ಬಿರುಸಿನ ವ್ಯಾಯಾಮ ಮಾಡಿದ 24 ಮತ್ತು 48 ಗಂಟೆಗಳ ಅವಧಿಯಲ್ಲಿ ಅವರಿಗೆ ಕೆಫಿನ್ ನೀಡಲಾಯಿತು. ತೊಡೆಯ ಸ್ನಾಯುವಿನ ಮೇಲೆ ಬಲ ಬೀಳುವಂತಹ ವ್ಯಾಯಾಮವನ್ನೇ ಆರಿಸಲಾಗಿತ್ತು. ಈ ತರುಣಿಯರು ಹೆಚ್ಚು ಹೆಚ್ಚು ಶ್ರಮ ವಹಿಸಿ ಈ ವ್ಯಾಯಾಮ ಮಾಡಿದಷ್ಟೂ, ಕೆಫಿನ್‌ನಿಂದ ಸ್ನಾಯು ನೋವು ತಗ್ಗಿಸುವ ಪ್ರಮಾಣವು ಹೆಚ್ಚಾಗುತ್ತಲೇ ಇತ್ತು! ಕಠಿಣ ವ್ಯಾಯಾಮ ಮಾಡುವುದಕ್ಕಿಂತ ಒಂದು ಗಂಟೆ ಮೊದಲು ಕೆಫಿನ್ ಸೇವಿಸಿದವರಲ್ಲಿ ನೋವಿನ ಪ್ರಮಾಣವು ಬೇರೆಯವರಿಗೆ ಹೋಲಿಸಿದಲ್ಲಿ ಶೇ.48ರಷ್ಟು ಕಡಿಮೆ ಇತ್ತು. ಅಂತೆಯೇ ಕಡಿಮೆ ಪರಿಶ್ರಮವುಳ್ಳ ವ್ಯಾಯಾಮ ಮಾಡಿದ ತರುಣಿಯರಲ್ಲಿ ನೋವಿನ ಪ್ರಮಾಣವು ಇತರರಿಗೆ ಹೋಲಿಸಿದಲ್ಲಿ ಶೇ.26ರಷ್ಟು ಕಡಿಮೆ ಇತ್ತು.

ಒಟ್ಟಿನಲ್ಲಿ ಕಠಿಣ ವ್ಯಾಯಾಮ ಮಾಡುವವರ ದೇಹದಲ್ಲಿ ಈ ಕೆಫಿನ್ ಹೆಚ್ಚು ಕೆಲಸ ಮಾಡಿ, ನೋವನ್ನು ಸಾಕಷ್ಟು ಕಡಿಮೆ ಮಾಡುತ್ತದೆ. ಸಾಧಾರಣ ಶ್ರಮವುಳ್ಳ ವ್ಯಾಯಾಮ ಮಾಡಿದವರ ದೇಹದಲ್ಲಿ ಕೆಫಿನ್ ಕೆಲಸ ಮಾಡುವುದು ಕೂಡ ಅಷ್ಟಕ್ಕಷ್ಟೆ.

ಸಂಶೋಧನಾ ತಂಡದ ಡಾ.ವಿಕ್ಟರ್ ಮೆರಿಡಾಕಿಸ್ ಹೇಳುವಂತೆ, "ನೋವು ತಗ್ಗಿಸಲು ನೀವು ಕೆಫಿನ್ ಅನ್ನು ಬಳಸಬಹುದಾದರೆ, ಮೊದಲಿಗಿಂತ ಹೆಚ್ಚು ಕಠಿಣವಾದ ವ್ಯಾಯಾಮ ಮಾಡಲು ಮತ್ತು ಆ ಮೂಲಕ ದೇಹ ತೂಕ ತಗ್ಗಿಸಲು ಸಹಕಾರಿಯಾಗಬಹುದು".

ಹಾಗಿದ್ದರೆ ಸ್ಲಿಮ್ ಆಗಲೆಂದು ಹೆಚ್ಚು ವ್ಯಾಯಾಮ ಮಾಡುವವರು ಜೊತೆಗೇ ಹೆಚ್ಚು ಕಾಫಿ ಸೇವಿಸಬಹುದು.! ಆದರೆ ಮಿತಿ ಮೀರದಂತೆ ಬಳಸುವುದು ಅವರವರ ವಿವೇಚನೆಗೆ ಬಿಟ್ಟ ಸಂಗತಿ.

rockinggirl.mamtha
VIP
VIP

Female
Number of posts: 471
Age: 17
Profession: student
MAJA POINTS MAJA POINTS: 3478
Registration date: 2009-07-03

View user profile

Back to top Go down

Re: Beauty tips for girls

Post by rockinggirl.mamtha on Mon 14 Sep - 11:03:37

ಚಳಿಗಾಲದಲ್ಲಿ ಮುಖ ಸೌಂದರ್ಯ
ರಶ್ಮಿ ಪೈ

PTI

ಚಳಿಗಾಲದಲ್ಲಿನ ಶೈತ್ಯ ಮಾರುತದಿಂದಾಗಿ ಮುಖದ ಸೌಂದರ್ಯವು ಬೇಗನೆ ಅಂದಗೆಡುತ್ತದೆ. ಮುಖವು ಹೆಚ್ಚಾಗಿ ಶೀತಗಾಳಿಯನ್ನು ಅಭಿಮುಖೀಕರಿಸುವುದರಿಂದ ಮುಖದ ಚರ್ಮವು ಬೇಗನೆ ಶುಷ್ಕವಾಗಿತ್ತದೆ. ಇದರಿಂದಾಗಿ ಅಲ್ಲಲ್ಲಿ ಬಳಿ ಕಲೆಗಳು ಮೂಡಿ ಮುಖವು ಸೌಂದರ್ಯ ಹೀನವಾಗುತ್ತದೆ. ಇಂತಹ ಸಮಸ್ಯೆಯಿಂದ ಮುಕ್ತಿ ಹೊಂದ ಬೇಕಾದರೆ, ಮುಖ ತೊಳೆಯಲು ಸಾಬೂನು ಬಳಸುವುದನ್ನು ನಿಲ್ಲಿಸಿ. ಇದರ ಬದಲಾಗಿ ಕಡಲೆ ಹುಡಿಯನ್ನು ಬಳಸಿ ಮುಖ ತೊಳೆಯುತ್ತಿದ್ದರೆ ಚರ್ಮವು ಶುಷ್ಕವಾಗುವುದಿಲ್ಲ.

ಮುಖದ ಚರ್ಮಕ್ಕೆ ಹೊಳಪು ನೀಡಲು ಕ್ಯಾರೆಟ್, ಆರೆಂಜ್ ಮತ್ತು ಸೌತೆಕಾಯಿ ರಸವನ್ನು ಲೇಪಿಸುವುದು ಒಳ್ಳೆಯದು. ಹೊರಗೆ ಸುತ್ತಾಡಿ ಬಂದ ನಂತರ ಅರ್ಧ ಟೊಮೇಟೋದಿಂದ ವರ್ತುಲಾಕಾರದಲ್ಲಿ ಮಸಾಜ್ ಮಾಡಿ ತಂದನಂತರ ತಣ್ಣೀರಿನಿಂದ ತೊಳೆದರೆ ಮುಖದಲ್ಲಿ ಅಂಟಿದ್ದ ಧೂಳು ಹೊರಹೋಗಿ ತ್ವಚೆಯ ರಂಧ್ರಗಳು ಶುಚಿಯಾಗುತ್ತವೆ.

ಮನೆಯಿಂದ ಹೊರಗಿಳಿಯುವಾಗ ಮುಖಕ್ಕೆ ಮತ್ತು ಕತ್ತಿಗೆ ಮಾಯಿಶ್ಚುರೈಸರ್ ಲೇಪನ ಮಾಡಿಕೊಂಡರೆ ಉತ್ತಮ. ಮೇಕಪ್ ಧರಿಸುತ್ತಿದ್ದರೆ ಅದು ಹಿತಮಿತವಾಗಿರಲಿ. ಮುಖದಲ್ಲಿ ಒಣಗಿದ ಚರ್ಮವಿದ್ದರೆ ವಾರಕ್ಕೆರಡು ಬಾರಿ ಫೇಶಿಯಲ್ ಸ್ಕ್ರಬ್ ಉಪಯೋಗಿಸಿ ಅನುಪಯುಕ್ತ ಚರ್ಮವನ್ನು ತೆಗೆದು ಹಾಕಿ.

ಮುಖಕ್ಕೆ ಶುದ್ಧ ಜೇನನ್ನು ಲೇಪಿಸಿ ಹತ್ತು ನಿಮಿಷ ಕಳೆದು ತಣ್ಣೀರಿನಲ್ಲಿ ತೊಳೆಯುವುದರಿಂದ ಮುಖ ಕಾಂತಿಯುಕ್ತವಾಗುವುದು. ಬೆಳಗ್ಗೆದ್ದ ಕೂಡಲೇ ಬರಿ ಹೊಟ್ಟೆಯಲ್ಲಿ ಕುದಿಸಿ ತಣಿಸಿದ ನೀರನ್ನು ಸೇವಿಸುವುದರಿಂದ ವಾಯುದೋಷ ನಿವಾರಣೆಯಾಗುವುದರೊಂದಿಗೆ ಮುಖದಲ್ಲಿ ಮೊಡವೆಗಳು ಮೂಡುವುದನ್ನೂ ನಿಯಂತ್ರಣಕ್ಕೆ ತರಬಹುದು.

ಚಳಿಗಾಲದಲ್ಲಿ ಅತೀ ತಣ್ಣಗಿನ ನೀರಿನಲ್ಲಿ ಮುಖ ತೊಳೆಯುವುದರಿಂದಾಗಿ ಚರ್ಮವು ಇನ್ನಷ್ಟು ಶುಷ್ಕಗೊಳ್ಳುತ್ತದೆ. ಆದುದರಿಂದ ಉಗುರು ಬಿಸಿ ನೀರಿನಿಂದ ಮುಖ ತೊಳೆಯುವುದು ಉತ್ತಮ. ದಿನಾ ಅರಶಿಣವನ್ನು ಹಾಲಿನ ಕೆನೆಯೊಂದಿಗೆ ಮುಖಕ್ಕೆ ಹಚ್ಚುತ್ತಿದ್ದರೆ ಚರ್ಮವು ಕಾಂತಿಯುತವಾಗಿ ಮುಖ ಹೊಳೆಯುತ್ತದೆ. ಮುಖದ ಸೌಂದರ್ಯ ವರ್ಧಿಸಲು ರಾಸಾಯನಿಕಯುಕ್ತ ಪ್ರಸಾದನ ಲೇಪನಗಳ ಹಿಂದೆ ಬಿದ್ದು ಆರೋಗ್ಯ ಕೆಡಿಸುವುದರಿಂದ ಆಹಾರದಲ್ಲಿ ಹೆಚ್ಚು ಪೋಷಕಾಂಶಗಳನ್ನು ಬಳಸಿ. ಮುಖವು ಒಣಗಿ ವಯಸ್ಸಾದಂತೆ ತೋರುತ್ತಿದ್ದರೆ ಅಲೋವಿರಾ ರಸವನ್ನು ಲೇಪಿಸಿ ಹತ್ತು ನಿಮಿಷಗಳ ನಂತರ ತಣ್ಣೀರಿನಿಂದ ತೊಳೆದರೆ ಸುಂದರ ವದನ ನಿಮ್ಮದಾಗುವುದು.

rockinggirl.mamtha
VIP
VIP

Female
Number of posts: 471
Age: 17
Profession: student
MAJA POINTS MAJA POINTS: 3478
Registration date: 2009-07-03

View user profile

Back to top Go down

Re: Beauty tips for girls

Post by rockinggirl.mamtha on Mon 14 Sep - 11:04:27

ಸ್ಲಿಮ್ ಆಗಬೇಕಿದ್ದರೆ ನೀರು ಸೇವನೆ ಹೆಚ್ಚಿಸಿ
ಸಾಕಷ್ಟು ಪ್ರಮಾಣದಲ್ಲಿ ನೀರು ಸೇವಿಸಿದಲ್ಲಿ ಚರ್ಮವು ಕಾಂತಿಯುಕ್ತವಾಗಿ, ಚರ್ಮದ ಸಂರಕ್ಷಣೆಯೂ ಆಗುತ್ತದೆ. ಇದರಿಂದ ದೇಹ ಸೌಂದರ್ಯ ಹೆಚ್ಚುವುದಲ್ಲದೆ, ಹೆಚ್ಚಿನ ಪ್ರಮಾಣದ ನೀರು ಸೇವನೆಯು ಪಚನ ಕ್ರಿಯೆಯನ್ನೂ ಉತ್ತೇಜಿಸುತ್ತದೆ. ಅತ್ಯಂತ ಸುಲಭವಾದ ಡಯಟ್ ಇದಾಗಿರುವುದರಿಂದ ದೇಹ ತೂಕದ ಬಗ್ಗೆ ಕಾಳಜಿ ವಹಿಸುವವರಿಗೆ ಇದೊಂದು ವರದಾನ ಇದ್ದಂತೆ.

ನೀರು ದೇಹದೊಳಗೆ ಸೇರಿರುವ ವಿಷಾಂಶವನ್ನು ಹೊರಹಾಕಲು ಸಹಾಯಕಾರಿ. ವೈದ್ಯಕೀಯ ವರದಿಗಳ ಪ್ರಕಾರ, ಹೆಚ್ಚು ಹೆಚ್ಚು ನೀರು ಸೇವನೆಯು ಕರುಳು ಕ್ಯಾನ್ಸರ್ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ರಾಸಾಯನಿಕಯುಕ್ತ ತಂಪು ಪಾನೀಯಗಳನ್ನು ಕುಡಿಯಲು ನಿಮ್ಮ ಮನಸ್ಸು ಹಾತೊರೆಯುತ್ತಿದ್ದರೆ, ಮನಸ್ಸಿನ ಚಂಚಲತೆಗೆ ಕಡಿವಾಣ ಹಾಕಿ, ತಂಪುಪಾನೀಯದ ಬದಲಿಗೆ ನೀರು ಕುಡಿಯುವ ಕಠಿಣ ನಿರ್ಧಾರವನ್ನು ಕೈಗೊಳ್ಳಿ.

ಒಂದುವೇಳೆ ನಿಮಗೆ ನೀರು ಕುಡಿಯಲು ಇಷ್ಟವಾಗದಿದ್ದಲ್ಲಿ, ನೀರಿನ ಬದಲಿಗೆ ಮಜ್ಜಿಗೆ ಸೇವಿಸಿ. ಹೊಟ್ಟೆ ಹಸಿದಿರುವ ಸಮಯದಲ್ಲಿ ಒಂದು ಲೋಟ ಮಜ್ಜಿಗೆ ಕುಡಿದಲ್ಲಿ ತಾತ್ಕಾಲಿಕ ಶಮನ ನೀಡುವುದರೊಂದಿಗೆ ದೇಹಕ್ಕೆ ಉತ್ತಮ ಪೋಷಕಾಂಶವನ್ನೂ ನೀಡುತ್ತದೆ.

rockinggirl.mamtha
VIP
VIP

Female
Number of posts: 471
Age: 17
Profession: student
MAJA POINTS MAJA POINTS: 3478
Registration date: 2009-07-03

View user profile

Back to top Go down

Re: Beauty tips for girls

Post by rockinggirl.mamtha on Mon 14 Sep - 11:07:00

ಕೂದಲಿನ ಸಮಸ್ಯೆಗಳು ಮತ್ತು ಆರೈಕೆ

ನಮ್ಮ ಶರೀರ ಸೌಂದರ್ಯವನ್ನು ಹೆಚ್ಚಿಸುವುದರಲ್ಲಿ ಕೂದಲುಗಳು ಹೆಚ್ಚಿನ ಪಾತ್ರವನ್ನು ವಹಿಸುತ್ತವೆ. ತಲೆಗೂದಲು ಅಥವಾ ಜಡೆಗಳೆಂದು ಕರೆಯಲ್ಪಡುವ ಇವುಗಳು ಲಲನೆಯರ ಉದ್ದ ಜಡೆಯಾಗಿ ನಾಗವೇಣಿ,ಕೃಷ್ಣವೇಣಿ ಎಂದೂ, ಪ್ರೇಮಕಾವ್ಯಗಳಲ್ಲಿ ಕವಿಯ ಪ್ರೇಮ ನಿವೇದನೆಗೆ ನಾಚಿ ತೇಲಾಡುವ ಮುಂಗುರಳು..ಅಲೆಯಂತೆ ತೇಲಾಡುವ ದಟ್ಟಗೂದಲು..ಗಿಡ್ಡ ಕೂದಲು..ಗಂಡಸರ ಜಿಗಿಯುವ ಕೂದಲು, ಹಾರುವ ಕೂದಲು..ಹೀಗೆ ನಾನಾ ವಿಧಗಳಲ್ಲಿ ವರ್ಣಿಸುವ ಕೂದಲಿನ ಆರೈಕೆ ಚೆನ್ನಾಗಿದ್ದರೆ ಮಾತ್ರ ಕೂದಲಿನ ಅಂದವನ್ನು ರಕ್ಷಿಸಬಹುದು.

ಕೂದಲಿನ ಸಮಸ್ಯೆಗಳತ್ತ ಮಾತ್ರ ದೃಷ್ಟಿ ಹರಿಸಿದರೆ ಹಲವಾರು ಸಮಸ್ಯೆಗಳು ನಮ್ಮನ್ನು ಕಾಡುತ್ತಿರುವುದನ್ನು ಕಾಣಬಹುದು. ಅವುಗಳಲ್ಲಿ ಪ್ರಧಾನವಾದುವುಗಳೆಂದರೆ ಕೂದಲು ಉದುರುವಿಕೆ, ತಲೆಹೊಟ್ಟು ಮತ್ತು ಕೂದಲಿನ ತುದಿಗಳ ಸೀಳು, ಹೇನು ಮೊದಲಾದವುಗಳಾಗಿವೆ.

ಕೂದಲು ಉದುರುವಿಕೆ
ಕೂದಲು ಉದುರುವಿಕೆಯ ಸಾಮಾನ್ಯವಾಗಿ ಬಹುತೇಕ ಮಂದಿಯ ಸಮಸ್ಯೆಯಾಗಿದ್ದು ದೈನಂದಿನ ದಿನಚರಿಯಲ್ಲಿ ಬದಲಾವಣೆಗಳನ್ನು ಕಂಡುಕೊಂಡು ಉತ್ತಮವಾದ ಆಹಾರಗಳ ಸೇವನೆ ಮತ್ತು ಕೂದಲಿನ ಶುಚಿತ್ವವನ್ನು ಕಾಪಾಡುವುದರ ಮೂಲಕ ಪರಿಹಾರವನ್ನು ಕಂಡುಕೊಳ್ಳಬಹುದು.

ಸಾಮಾನ್ಯವಾಗಿ ನಮಗರಿಯದಂತೆ ಪ್ರತಿದಿನ 20 ರಿಂದ 100 ಕೂದಲುಗಳು ಉದುರುತ್ತವೆ. ಕೂದಲುಗಳ ಬೆಳವಣಿಗೆಗೆ ಮನುಷ್ಯ ಶರೀರದಲ್ಲಿರುವ ಹಾರ್ಮೋನುಗಳಾದ ಟೆಸ್ಟೋಸ್ಟೆರೋನ್ ಮತ್ತು ಸ್ತ್ರೀ ಹಾರ್ಮೋನ್ ಆದ ಈಸ್ಟ್ರೋಜನ್‌ಗಳು ಸಹಾಯ ಮಾಡುತ್ತವೆ. ಇವುಗಳ ಉತ್ಪಾದನಾ ಮಟ್ಟವು ಕಡಿಮೆಯಾದಲ್ಲಿ ಕೂದಲುದುರುವಿಕೆಯು ಸಂಭವಿಸುತ್ತದೆ.

ಸಮತೂಕದ ಆಹಾರವನ್ನು ಸೇವಿಸುವುದರಿಂದ ಅಂದರೆ ತಮ್ಮ ಆಹಾರಗಳಲ್ಲಿ ಹಸುರೆಲೆ ತರಕಾರಿಗಳು,ಮೂಲಂಗಿ, ಸೋಯಾಬೀನ್, ಮಾವು,ಸಕ್ಕರೆ ಬಾದಾಮಿ, ದ್ವಿದಳ ಧಾನ್ಯಗಳು, ಹಾಲು,ಮೊಸರು,ಬೆಣ್ಣೆ, ಬೇಳೆ ಕಾಳುಗಳನ್ನು ಯಥೇಚ್ಛವಾಗಿ ಸೇವಿಸುವುದರಿಂದ ಇಂತಹ ಸಮಸ್ಯೆಯನ್ನು ಪರಿಹರಿಸಬಹುದು.

ಉತ್ತಮವಾದ ಆಹಾರದ ಸೇವನೆಯೊಂದಿಗೆ ವ್ಯಾಯಾಮ, ಬಿಸಿಲಿನಿಂದ ಕೂದಲನ್ನು ರಕ್ಷಿಸುವುದು,ಶುದ್ಧವಾದ ನೀರಿನಿಂದ ತೊಳೆಯುವುದು, ಬಾಚಣಿಗೆ,ಟವಲ್ ಮೊದಲಾದವುಗಳ್ನು ಶುಚಿಯಾಗಿರಿಸುವುದರಿಂದಲೂ ಕೂದಲು ಉದುರುವುದನ್ನು ತಡೆಗಟ್ಟಬಹುದು.

ಶರೀರಕ್ಕೆ ಆಹಾರ, ವ್ಯಾಯಾಮ ಇವುಗಳ ಜೊತೆಗೆ ನಿದ್ರೆಯೂ ಅತ್ಯಗತ್ಯ. ಸರಾಸರಿ ಎಂಟು ಗಂಟೆಗಳ ಕಾಲ ನಿದ್ದೆ ಮಾಡುವುದರಿಂದ ಈ ಸಮಸ್ಯೆಯನ್ನು ಹೋಗಲಾಡಿಸಬಹುದು.ರಾತ್ರಿ ಮಲಗುವ ವೇಳೆ ತೆಂಗಿನೆಣ್ಣೆಯನ್ನು ಕೂದಲಿನ ಬುಡಕ್ಕೆ ಹಚ್ಚಿ ನಿದ್ದೆ ಹೋಗುವುದರಿಂದ ಚೆನ್ನಾಗಿ ನಿದ್ದೆ ಆವರಿಸುವುದು ಮಾತ್ರವಲ್ಲದೆ ಕೂದಲಿನ ಬೆಳವಣಿಗೆಗೆ ಇದು ಸಹಾಯ ಮಾಡುತ್ತದೆ.

ಹಗಲಲ್ಲಿ ಕೂದಲಿಗೆ ಎಣ್ಣೆ ಹಚ್ಚಿ ತಿರುಗಾಡುವುದರಿಂದ ವಾತಾವರಣದಲ್ಲಿರುವ ಧೂಳು ಮತ್ತಿನ್ನಿತರ ಹಾನಿಕಾರಕ ಕಣಗಳು ಎಣ್ಣೆಯುಕ್ತ ಕೂದಲಿಗೆ ಅಂಟಿಕೊಳ್ಳುತ್ತವೆ. ಆದುದರಿಂದ ಹೊರಗೆ ಹೋಗುವಾಗ ಕೂದಲಿಗೆ ಎಣ್ಣೆ ಹಚ್ಚದಿರುವುದು ಒಳ್ಳೆಯದು.

ಕೂದಲು ಉದುರುವಿಕೆಯು ಅತಿಯಾಗಿದ್ದರೆ ಒಂದು ಟೀ ಚಮಚ ಮೆಂತ್ಯವನ್ನು ಕೊಬ್ಬರಿ ಎಣ್ಣೆಯಲ್ಲಿ ಬೆರಸಿ ಏಳು ದಿನಗಳಕಾಲ ಬಿಸಿಲಿನಲ್ಲಿಡಿ ನಂತರ ದಿನಾ ಅದನ್ನು ಹಚ್ಚುತ್ತಿದ್ದರೆ ಕೂದಲು ಉದುರುವಿಕೆಯು ಕ್ರಮೇಣ ಕಡಿಮೆಯಾಗುತ್ತದೆ.ವಿವಿಧ ಶ್ಯಾಂಪೂಗಳನ್ನು ಉಪಯೋಗಿಸುತ್ತಾ ಬಂದರೆ ಕೂದಲು ಉದುರುವಿಕೆ ಸಾಮಾನ್ಯ.

ಕೂದಲು ತೊಳೆಯಲು ಶ್ಯಾಂಪೂವಿನ ಬದಲು ದಾಸವಾಳದ ಎಲೆ, ಹೂಗಳನ್ನು ನೀರಿನಲ್ಲಿ ಹಾಕಿ,ಹಿಚುಕಿ ರಸ ತೆಗೆದು ಅದರಲ್ಲಿ ಕೂದಲು ತೊಳೆದರೆ ಶ್ಯಾಂಪೂವಿನಿಂದ ತೊಳೆದಂತೆ ನಯವಾಗಿರುವುದು. ಕೂದಲಿನೆಡೆಯಲ್ಲಿರುವ ಕೊಳೆಯನ್ನು ತೊಳೆಯಲು ಎಂದೂ ಸಾಬೂನನ್ನು ಬಳಸಲೇ ಬೇಡಿ ಇದರ ಬದಲು ಕಡಲೆ ಹುಡಿ ಅಥವಾ ದಾಸವಾಳದ ಹುಡಿಯನ್ನು ಬಳಸುವುದು ಉತ್ತಮ.ಕೂದಲಿಗೆ ಬಣ್ಣವನ್ನು ನೀಡಬೇಕೆಂದಾದರೆ ಮದರಂಗಿ ಉತ್ತಮವಾದದ್ದು, ಇದರಿಂದಾಗಿ ಕೂದಲಿಗೆ ಬಣ್ಣದೊಂದಿಗೆ ಹೊಳಪು ದೊರೆಯುತ್ತದೆ.

ತಲೆಹೊಟ್ಟು
ತಲೆಯಲ್ಲಿರುವ ಚರ್ಮವು ಅತಿಯಾಗಿ ಶುಷ್ಕವಾಗಿರುವುದರಿಂದ ತಲೆಹೊಟ್ಟು ತಲೆದೋರುತ್ತದೆ. ತಲೆಯ ಚರ್ಮದಲ್ಲಿ ಎಣ್ಣೆಯ ಅಂಶದ ಕೊರತೆ, ನಿದ್ರಾಹೀನತೆ, ಮಾನಸಿಕ ಒತ್ತಡ, ಕ್ರಮಾತೀತವಾದ ಜೀವನ ಶೈಲಿ, ಅಧಿಕವಾಗಿ ಶ್ಯಾಂಪೂ, ಕಂಡೀಶನರ್, ಬಣ್ಣ ಮೊದಲಾದವುಗಳು ತಲೆಹೊಟ್ಟು ಉಂಟಾಗುವಂತೆ ಮಾಡುತ್ತವೆ.

ಉತ್ತಮವಾದ ಆಹಾರ ಸೇವನೆಯೊಂದಿಗೆ ಹಿತ ಮಿತವಾದ ವ್ಯಾಯಾಮ ಮತ್ತು ನಿದ್ರೆ, ತಲೆಗೂದಲಿಗೆ ಎಣ್ಣೆ ಸವರಿ ಬೆರಳುಗಳಿಂದ ಮೆದುವಾಗಿ ಮಸಾಜ್ ಮಾಡುವುದರಿಂದ ಮತ್ತು ರಾಸಾಯನಿಕ ಪದಾರ್ಥಗಳ ಬಳಕೆಯನ್ನು ವರ್ಜಿಸುವುದರಿಂದ ತಲೆಹೊಟ್ಟನ್ನು ನಿಯಂತ್ರಣಕ್ಕೆ ತರಬಹುದು.

ಆಹಾರ ಸೇವನೆಯಲ್ಲಿ ಬಹುಪಾಲು ಹಸುರೆಲೆ ತರಕಾರಿ,ಧಾನ್ಯಗಳನ್ನು ಅಳವಡಿಸಿಕೊಳ್ಳುವುದರಿಂದ ಇದು ನಿಯಂತ್ರಣಕ್ಕೆ ಬರುವುದು. ತಲೆಹೊಟ್ಟು ಅಧಿಕವಾಗಿದೆಯೆಂದು ತಲೆಹೊಟ್ಟು ನಿವಾರಕ ಶ್ಯಾಂಪೂಗಳನ್ನು ಬಳಸುವುದು ಬೇಡ ಯಾಕೆಂದರೆ ಇವುಗಳು ಹಚ್ಚಿನ ರಾಸಾಯನಿಕಗಳನ್ನು ಒಳಗೊಂಡಿರುವುದರಿಂದ ಶರೀರಕ್ಕೆ ಹಾನಿಕಾರಕ.

ತಲೆಹೊಟ್ಟು ತಲೆತುರಿಕೆಯನ್ನುಂಟು ಮಾಡುತ್ತದೆ ಕೆಲವೊಮ್ಮೆ ಉಗುರುಗಳಿಂದ ತುರಿಸಿಕೊಂಡು ಗಾಯಗಳಾಗುವ ಸಾಧ್ಯತೆ ಹೆಚ್ಚು, ನೆತ್ತಿಯಲ್ಲುಂಟಾಗುವ ಗಾಯಗಳು ಬೇಗನೆ ಇತರ ರೋಗಗಳಿಗೆ ಆಹ್ವಾನ ನೀಡುತ್ತವೆ ಆದುದರಿಂದ ತಲೆಹೊಟ್ಟನ್ನು ತುರಿಸಲು ಹೋಗಬೇಡಿ.

ತಲೆಹೊಟ್ಟು ಇದ್ದರೆ ಕೊಬ್ಬರಿ ಎಣ್ಣೆಯಿಂದ ಕೂದಲಿನ ಬುಡಕ್ಕೆ ಹತ್ತು ನಿಮಿಷಗಳ ಕಾಲ ಬೆರಳಿನಿಂದ ಚೆನ್ನಾಗಿ ಮಸಾಜ್ ಮಾಡಬೇಕು. ಲಿಂಬೆ ರಸವನ್ನು ಹಚ್ಚುವುದರಿಂದ ತಲೆಹೊಟ್ಟನ್ನು ನಿಯಂತ್ರಿಸಬಹುದು.ತಲೆಹೊಟ್ಟಿನ ನಿವಾರಣೆಗೆ ಅತೀ ಪರಿಣಾಮಕಾರಿ ಚಿಕಿತ್ಸೆಯೆಂದರೆ ಪಂಚಕರ್ಮ ಚಿಕಿತ್ಸೆ, ಯಾಕೆಂದರೆ ಇದರಿಂದಾಗಿ ತಲೆಹೊಟ್ಟು ಮತ್ತೆ ಮರುಕಳಿಸುವುದಿಲ್ಲ.

ಕೂದಲಿನ ತುದಿಯ ಸೀಳುವಿಕೆ
ಕೂದಲು ಉದ್ದವಾಗಿದ್ದರೂ ಗಿಡ್ಡವಾಗಿದ್ದರೂ ಕೂದಲಿನ ತುದಿಗಳಲ್ಲಿ ಸೀಳುಗಳು ಕಂಡು ಬಂದರೆ ಕೂದಲು ಬೆಳೆಯುವುದಿಲ್ಲ.ಇದಕ್ಕೆ ಕಾರಣ ಪೋಷಕಾಂಶಗಳ ಕೊರತೆ ಮತ್ತು ತಲೆಕೂದಲು ಸರಿಯಾಗಿ ಒಣಗದಿರುವುದಾಗಿದೆ.
ತಲೆಕೂದಲಿನಲ್ಲಿ ಧೂಳು ಅಥವಾ ಇನ್ಯಾವುದೇ ರಾಸಾಯನಿಕ ಪದಾರ್ಥಗಳು ಉಳಿದುಕೊಂಡರೆ, ಕೂದಲು ತೊಳೆದ ನಂತರ ಸರಿಯಾಗಿ ಒಣಗದೇ ಇದ್ದರೆ, ಒದ್ದೆ ಕೂದಲನ್ನು ಬಿಗಿಯಾಗಿ ಹೆಣೆಯುವುದರಿಂದಲೂ, ತೈಲಾಂಶ ಕಡಿಮೆಯಿದ್ದರೂ ಕೂದಲಿನ ಸೀಳು ತಲೆದೋರುತ್ತದೆ.

ಕೂದಲು ತೊಳೆದ ನಂತರ ಚೆನ್ನಾಗಿ ನಯವಾದ ಬಟ್ಟೆಯಿಂದ ಉಜ್ಜಿ, ಗಾಳಿಯಲ್ಲಿ ಒಣಗಿಸಬೇಕು.ಕೂದಲನ್ನು ಒಣಗಿಸಲು ಹೇರ್ ಡ್ರೈಯರ್ ಬಳಸುವುದು ಒಳ್ಳೆಯದಲ್ಲ. ಒದ್ದೆ ಕೂದಲನ್ನು ಬಾಚುವುದಾಗಲೀ ಗಟ್ಟಿಯಾಗಿ ಹೆಣೆಯುವುದಾಗಲೀ ಮಾಡಬಾರದು.ಒದ್ದೆ ಕೂದಲನ್ನು ಬಾಚುವುದರಿಂದ ಕೂದಲುಗಳು ಬೇಗನೆ ತುಂಡಾಗುತ್ತವೆ.ಆದುದರಿಂದ ಕೂದಲೆಳೆಗಳನ್ನು ಬೆರಳಿನಿಂದಲೇ ಬಿಡಿಸಿ, ಗಾಳಿಯಲ್ಲಿ ಒಣಗಿಸುವುದು ಉತ್ತಮ.

ಶ್ಯಾಂಪೂ ಬಳಸಿದ ನಂತರ ಕಂಡೀಷನರ್ ಬಳಸುವುದರಿಂದ ಕೂದಲಿಗೆ ಹೆಚ್ಚಿನ ಹೊಳಪು ಸಿಗುತ್ತದೆ. ಅಧಿಕ ರಾಸಾಯನಿಕಯುಕ್ತವಾದ ಶ್ಯಾಂಪೂಗಳನ್ನು ಬಳಸುವುದರಿಂದ ಕೂದಲಿಗೆ ಹಾನಿಯಾಗುವ ಸಾಧ್ಯತೆ ಹೆಚ್ಚು. ಆದುದರಿಂದ ಆಯುರ್ವೇದ ಶ್ಯಾಂಪೂಗಳನ್ನು ಅಥವಾ ಮನೆಯಲ್ಲಿ ತಯಾರಿಸಿದ ಶ್ಯಾಂಪೂಗಳನ್ನು ಕೂದಲು ತೊಳೆಯಲು ಉಪಯೋಗಿಸಬಹುದು.

ಕೂದಲಿನ ತುದಿ ಸೀಳುವಿಕೆ ಕಂಡಕೂಡಲೇ ತುದಿ ಕತ್ತರಿಸುವುದು ಒಳ್ಳೆಯದು, ಯಾಕೆಂದರೆ ಸೀಳಗೂದಲುಗಳು ಬೆಳವಣಿಗೆಯನ್ನು ಮೊಟಕುಗೊಳಿಸುತ್ತವೆ. ಕೂದಲಿಗೆ ಎಣ್ಣೆ ಹಚ್ಚುವಾಗ ಅದರ ತುದಿಭಾಗಕ್ಕೂ ಹಚ್ಚುವುದರಿಂದ ಸೀಳುಗಳನ್ನು ಕಡಿಮೆ ಮಾಡಬಹುದು.

ಹೇನು
ದಟ್ಟವಾದ ಕೂದಲಿನಲ್ಲಿ ಹೇನುಗಳು ಬೇಗನೆ ವಂಶಾಭಿವೃದ್ಧಿಯಾಗುತ್ತವೆ. ಹೇನುಗಳ ಅಭಿವೃದ್ಧಿಗೆ ಪ್ರಧಾನ ಕಾರಣ ಶುಚಿತ್ವದ ಕೊರತೆಯಾಗಿದೆ. ಕೂದಲಿನಲ್ಲಿ ಕೊಳೆ ತಂಗಿದ್ದರೆ ಹೇನುಗಳು ಉಂಟಾಗುತ್ತವೆ. ತಲೆಯಿಂದ ತಲೆಗೆ, ಬಾಚಣಿಕೆ, ಟವಲ್ ಮುಂತಾದವುಗಳಂದಾಗಿಯೂ ಒಬ್ಬರಿಂದೊಬ್ಬರಿಗೆ ಹೇನುಗಳು ಹರಡಬಹುದು.

ಹೇನುಗಳನ್ನು ನಾಶಗೊಳಿಸಲು ಮೊದಲನೆಯದಾಗಿ ಶುಚಿತ್ವವನ್ನು ಕಾಪಾಡಬೇಕು. ಇತರರ ಟವೆಲ್, ಬಾಚಣಿಗೆಗಳನ್ನು ಬಳಸಬಾರದು. ಹೇನುಗಳನ್ನು ನಾಶಮಾಡಲು ಹೇನು ನಾಶಿನಿಗಳನ್ನು ಬಳಸುವುದಕ್ಕಿಂತ, ಸಾಧ್ಯವಾದಷ್ಟು ಬಾರಿ ಬಾಚಣಿಗೆಯಿಂದ ಬಾಚಿ ಹೇನು ತೆಗೆಯುವುದು ಉತ್ತಮ ಮತ್ತು ಹೇನಿನ ಮೊಟ್ಟೆಗಳನ್ನು ಆದಷ್ಟು ಕಡಿಮೆ ಮಾಡಲು ಜಾಗ್ರತೆ ವಹಿಸಬೇಕು.ಕೂದಲನ್ನು ವಾರಕ್ಕೆರಡು ಬಾರಿ ಚೆನ್ನಾಗಿ ತೊಳೆಯಬೇಕು.

ಹೇನು ಅತಿಯಾಗಿದ್ದಲ್ಲಿ ವಾರಕ್ಕೆ ನಾಲ್ಕು ಬಾರಿ ಕೂದಲು ತೊಳೆಯುವುದು ಒಳ್ಳೆಯದು.ಆಹಾರದಲ್ಲಿ ಪೋಷಕಾಂಶದ ಕೊರತೆಯು ಹೇನಿಗೆ ಕಾರಣವಾಗುತ್ತದೆ. ಅಧಿಕವಾದ ಹೇನಿನಿಂದಾಗಿ ರಕ್ತ ಹೀನತೆ, ತಲೆಹುಣ್ಣು ಮೊದಲಾದ ರೋಗಗಳು ಬರಲು ಸಾಧ್ಯತೆ ಹೆಚ್ಚು. ಕೊಬ್ಬರಿ ಎಣ್ಣೆ ಮತ್ತು ಸೀಮೆ ಎಣ್ಣೆಯನ್ನು ಸಮಪ್ರಮಾಣದಲ್ಲಿ ಬೆರೆಸಿ ತಲೆಗೆ ಹಚ್ಚಿ ಐದು ನಿಮಿಷಗಳ ನಂತರ ಶ್ಯಾಂಪೂ ಬಳಸಿ ಸ್ನಾನ ಮಾಡುವುದರಿಂದ ಹೇನು ನಿವಾರಣೆಯಾಗುತ್ತದೆ.

ಬಿಸಿ ನೀರಿನಲ್ಲಿ ಹತ್ತಿ ಬಟ್ಟೆಯನ್ನು ಮುಳುಗಿಸಿ, ಅದನ್ನು ಹಿಂಡಿ ಆ ಬಟ್ಟೆಯನ್ನು ತಲೆಗೆ ಸುತ್ತುವುದರಿಂದಲೂ ಹೇನಿನ ಬೆಳವಣಿಗೆಯನ್ನು ತಡೆಯಬಹುದು.ಕೊಬ್ಬರಿ ಎಣ್ಣೆಯನ್ನು ಕಾಯಿಸಿ ಅದಕ್ಕೆ ನಾಲ್ಕು ಎಲೆ ತುಳಸಿಯನ್ನು ಹಾಕಿ ಆ ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಹೇನನ್ನು ನಿಯಂತ್ರಣಕ್ಕೆ ತರಬಹುದು. ತುಳಸಿ ಹೂ ಅಥವಾ ಎಲೆಗಳನ್ನು ಮುಡಿಯುವುದರಿಂದ ಹೇನಿನ ಮೊಟ್ಟೆಗಳು ಉತ್ಪತ್ತಿಯಾಗುವುದಿಲ್ಲ.

rockinggirl.mamtha
VIP
VIP

Female
Number of posts: 471
Age: 17
Profession: student
MAJA POINTS MAJA POINTS: 3478
Registration date: 2009-07-03

View user profile

Back to top Go down

Re: Beauty tips for girls

Post by rockinggirl.mamtha on Mon 14 Sep - 11:10:05

ಅಲಂಕಾರಕ್ಕೆ ಮೂರು ವರ್ಷ ವ್ಯರ್ಥ


ಮಹಿಳೆಯರು ಸಾಮಾನ್ಯವಾಗಿ ಹೊರಗೆ ತಿರುಗಾಡಲು ಹೋಗುವಾಗ ಚೆನ್ನಾಗಿ ಕಾಣಬೇಕೆಂದು ಬಯಸುವುದು ಸಹಜ. ಅದಕ್ಕಾಗಿ ಅವರು ತಮ್ಮ ಸೌಂದರ್ಯ ವೃದ್ಧಿಗೆ ಹೆಚ್ಚುಗಮನ ನೀಡುವುದು ಅತ್ಯಗತ್ಯವೆನಿಸಿದೆ. ಆದರೆ ಸೌಂದರ್ಯವೃದ್ಧಿಗೆ ತಮ್ಮ ಅಮೂಲ್ಯ ಸಮಯವನ್ನು ಸಿಕ್ಕಾಪಟ್ಟೆ ವ್ಯರ್ಥಮಾಡದೇ ಸಮಯವನ್ನು ಮಿತ್ಯವ್ಯಯವಾಗಿ ಬಳಸುವುದನ್ನು ಈಗ ಮಹಿಳೆಯರು ಕಲಿಯಬೇಕಾಗಿದೆ.

ಏಕೆಂದರೆ ಹೊಸ ಸಮೀಕ್ಷೆಯೊಂದರ ಅಧ್ಯಯನದ ವರದಿಯಲ್ಲಿ ತಮ್ಮ ಅಮೂಲ್ಯವಾದ ಮೂರು ವರ್ಷಗಳನ್ನು ಮನೆಯಿಂದ ಹೊರಗೆ ಹೋಗುವಾಗ ಅಲಂಕಾರ ಮಾಡಿಕೊಳ್ಳುವುದರಲ್ಲೇ ಮಹಿಳೆಯರು ಕಳೆಯುತ್ತಾರೆ ಎಂಬ ವಿಷಯವನ್ನು ಬಹಿರಂಗಪಡಿಸಿದೆ.

ಪ್ರತಿ ಬಾರಿ ಮನೆಯಿಂದ ಹೊರಗೆ ತೆರಳುವಾಗಲೂ ಒಂದು ಗಂಟೆ 12 ನಿಮಿಷಗಳ ಸಮಯವನ್ನು ವ್ಯರ್ಥಮಾಡುವುದರಿಂದ ಜೀವಿತಾವಧಿಯಲ್ಲಿ ಮೂರು ವರ್ಷಗಳನ್ನು ವ್ಯರ್ಥಮಾಡುತ್ತಾರೆಂದು ವರದಿ ತಿಳಿಸಿದೆ. ಕೊನೆಯ ಗಳಿಗೆಯಲ್ಲಿ ಉಡುಪು ಬದಲಾವಣೆ, ಕನ್ನಡಿಯ ಮುಂದೆ ನಿಂತು ಓರೆಕೋರೆ ತಿದ್ದುವುದು ಮತ್ತು ಹ್ಯಾಂಡ್‌ಬ್ಯಾಗ್‌ನಲ್ಲಿ ಚೆಲ್ಲಾಪಿಲ್ಲಿ ಮಾಡುತ್ತಾ ಹುಡುಕುವುದರಲ್ಲೇ ಒಂದು ಗಂಟೆ 12 ನಿಮಿಷಗಳ ಸರಾಸರಿ ಸಮಯ ಬೇಕಾಗುತ್ತದೆ.


ರಾತ್ರಿ ಸಮಾರಂಭಕ್ಕೆ ಅಥವಾ ಮೋಜಿನ ಕೂಟಕ್ಕೆ ತಯಾರಿ ನಡೆಸುವಾಗ ಮಹಿಳೆಯರು ತಮ್ಮ ಕಾಲುಗಳ ಕೂದಲು ತೆಗೆಯುವುದಕ್ಕೆ 22 ನಿಮಿಷ, ತಮ್ಮ ಕೇಶವಿನ್ಯಾಸಕ್ಕೆ 23 ನಿಮಿಷ, ಮೇಕಪ್ ಮಾಡಲು 14 ನಿಮಿಷ, ಉಡುಪು ಬದಲಿಸಲು 6 ನಿಮಿಷ ಹಿಡಿಯುತ್ತದೆ.

ಪ್ರತಿದಿನ ಬೆಳಿಗ್ಗೆ ಕೆಲಸಕ್ಕೆ ಹೊರಡುವ ಮುಂಚೆ 40 ನಿಮಿಷಗಳನ್ನು ಕಳೆಯುವುದು ಸೇರಿದಂತೆ ಜೀವಿತಾವಧಿಯಲ್ಲಿ 2 ವರ್ಷ, 9 ತಿಂಗಳು ವ್ಯರ್ಥವಾಗಿರುತ್ತದೆ. ಪುರುಷರಿಗೆ ಕಹಿಸುದ್ದಿ ಏನೆಂದರೆ ಅವರು ತಮ್ಮ ಪತ್ನಿ ಅಥವಾ ಗೆಳತಿಯರು ಹ್ಯಾಂಡ್‌ಬ್ಯಾಗ್ ಆಯ್ಕೆ ಮಾಡಿಕೊಳ್ಳುವುದಕ್ಕೆ ಅಥವಾ ಕೊನೆಯ ಜೊತೆ ಪಾದರಕ್ಷೆ ಬದಲಿಸಲು ಒಟ್ಟು ಸುಮಾರು 3 ತಿಂಗಳ ಕಾಲ ಕಾಯುತ್ತಾರೆ.


ಮಹಿಳೆಯರು ಅಂಗಡಿಗಳಿಗೆ ಹೋದಾಗಲೂ ಅದೇ ಕಥೆ. ಪುರುಷರು ಪ್ರತಿಬಾರಿ ಹೊರಗೆ ನಿಂತು ಶತಪಥ ತಿರುಗುವುದು ಸರ್ವೇಸಾಮಾನ್ಯ ಸಂಗತಿಯಾಗಿದೆ. ಸತತವಾಗಿ ಕಾದು ಮೂರನೇ ಎರಡರಷ್ಟು ಪುರುಷರಿಗೆ ಬೇಸರ ಬಂದಿದ್ದರೆ 10ರಲ್ಲಿ ಒಬ್ಬರು ಇದೇ ಕಾರಣಕ್ಕಾಗಿ ವಿಚ್ಛೇದನವನ್ನೂ ನೀಡಿದ್ದಾರೆಂದು ಸಮೀಕ್ಷೆ ಬಹಿರಂಗಪಡಿಸಿದೆ.

rockinggirl.mamtha
VIP
VIP

Female
Number of posts: 471
Age: 17
Profession: student
MAJA POINTS MAJA POINTS: 3478
Registration date: 2009-07-03

View user profile

Back to top Go down

Re: Beauty tips for girls

Post by rockinggirl.mamtha on Mon 14 Sep - 11:10:54

ಗರ್ಭಿಣಿ ಧೂಮಪಾನ: ಹೆಣ್ಣುಮಕ್ಕಳ ಸಂತಾನಶಕ್ತಿಗೆ ಕುಂದು

ಗರ್ಭಿಣಿ ಸ್ತ್ರೀಯರು ಧೂಮಪಾನದಲ್ಲಿ ನಿರತರಾಗುವುದರಿಂದ ಅವರಿಗೆ ಜನಿಸುವ ಹೆಣ್ಣುಮಕ್ಕಳ ಸಂತಾನ ಶಕ್ತಿ ಕುಂದುತ್ತದೆಂದು ಸಂಶೋಧನೆಯಿಂದ ಸಾಬೀತಾಗಿದೆ. ಕೆನಡಾದ ಟೊರೆಂಟೊ ವಿವಿಯ ಸಂಶೋಧಕರು ಇಲಿಯನ್ನು ಮಾದರಿಯಾಗಿ ಇಟ್ಟುಕೊಂಡು ಅಧ್ಯಯನ ನಡೆಸಿದರು.

ಸಂಶೋಧನೆಯ ಭಾಗವಾಗಿ ಸಿಗರೇಟ್ ಹೊಗೆಯಲ್ಲಿರುವ ಪರಿಸರ ವಿಷಕಾರಿ ವಸ್ತುವಾದ ಪಾಲಿಸೈಕ್ಲಿಕ್ ಆರೋಮ್ಯಾಟಿಕ್ ಹೈಡ್ರೋಕಾರ್ಬನ್ಸ್‌ನ್ನು(ಪಿಎಎಚ್) ಹೆಣ್ಣು ಇಲಿಯ ಚರ್ಮದೊಳಗೆ ಚುಚ್ಚುಮದ್ದಿನ ರೂಪದಲ್ಲಿ ನೀಡಲಾಯಿತು. ತಾಯಿ ಇಲಿ ಮಾಮೂಲಿ ಗಾತ್ರದ ಮರಿಗಳಿಗೆ ಜನ್ಮನೀಡಿದರೂ ಸಹ ಅದರ ಹೆಣ್ಣುಮರಿಗಳ ಸಂತಾನ ಶಕ್ತಿ ಕುಂದಿರುವುದು ಕಂಡುಬಂತು.

ಹೆಣ್ಣುಮರಿಗಳಲ್ಲಿ ಅಂಡಾಣು ಕೋಶಗಳ ಸಂಖ್ಯೆಯ ಮೇಲೆ ಪಿಎಎಚ್‌‍ಎಸ್‌ನಿಂದ ಉಂಟಾದ ದುಷ್ಪರಿಣಾಮಕ್ಕೆ ಆರಿಲ್ ಹೈಡ್ರೋಕಾರ್ಬನ್ ರಿಸೆಪ್ಟರ್(ಎಎಚ್‌ಆರ್) ಚುಚ್ಚುಮದ್ದು ನೀಡಿ ಅಪೋಪ್‌ಟೊಸಿಸ್ ಪ್ರಕ್ರಿಯೆ ಮೂಲಕ ಜೀವಕೋಶಗಳನ್ನು ಸಾಯಿಸುವ ಪ್ರೋಟೀನ್ ಉತ್ಪಾದನೆಯನ್ನು ನಿಯಂತ್ರಿಸಲಾಯಿತು.

ಮಾನವ ಜೀವಿಗಳ ಅಂಡಾಣು ಕೋಶಗಳಲ್ಲಿಯೂ ಪಿಎಎಚ್‌ಗಳು ಇದೇ ರೀತಿಯ ಪರಿಣಾಮ ಉಂಟುಮಾಡುವುದು ಕಂಡುಬಂತು ಎಂದು ಸಂಶೋಧಕರು ತಿಳಿಸಿದ್ದಾರೆ.

rockinggirl.mamtha
VIP
VIP

Female
Number of posts: 471
Age: 17
Profession: student
MAJA POINTS MAJA POINTS: 3478
Registration date: 2009-07-03

View user profile

Back to top Go down

Re: Beauty tips for girls

Post by rockinggirl.mamtha on Mon 14 Sep - 11:14:10

ಕೂದಲಿನ ಆರೋಗ್ಯಕ್ಕಾಗಿ ಕೆಲವು ಸಲಹೆಗಳು


1. ನಿಮ್ಮ ಕೂದಲನ್ನು ವಾರಕ್ಕೆರಡು ಬಾರಿ ಮಾತ್ರ ತೊಳೆಯಿರಿ.ತೊಳೆಯಲು ಬಿಸಿನೀರನ್ನು ಬಳಸುವುದು ಬೇಡ.ತೊಳೆಯಲು ಶ್ಯಾಂಪು ಬಳಸುತ್ತಿದ್ದರೆ, ಸೌಮ್ಯವಾದ
ಶ್ಯಾಂಪೂಗಳನ್ನು ಬಳಸುವುದು ಉತ್ತಮ.

ಉನ್ನತ ಗುಣಮಟ್ಟದ ಬ್ರಷ್ ಅಥವಾ ಬಾಚಣಿಗೆಯನ್ನು ಬಳಸಿ. ಕೂದಲು ತೊಳೆದ ನಂತರ ಹತ್ತು ಹದಿನೈದು ನಿಮಿಷಗಳ ಕಾಲ ಕೂದಲು ಬುಡಗಳನ್ನು ಬೆರಳಿನಿಂದ ಮಸಾಜ್ ಮಾಡಿ.ಇದು ರಕ್ತಸಂಚಲನೆ ಸುಗಮವಾಗಲು ಸಹಾಯ ಮಾಡುತ್ತದೆ ಮತ್ತು ಕೂದಲಿನ ಬೇರುಗಳಿಗೆ ಶಕ್ತಿಯನ್ನು ನೀಡುತ್ತದೆ.

2. ಕೂದಲಿನ ಬುಡಕ್ಕೆ ಮತ್ತು ಕೂದಲಿಗೆ ತೆಂಗಿನ ಹಾಲನ್ನು ಹಾಕಿ ಮಸಾಜ್ ಮಾಡಿ. ಅರ್ಧಗಂಟೆ ಕಳೆದ ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ವಾರಕ್ಕೆ ಮೂರು ಬಾರಿ ಇದನ್ನು ಆವರ್ತಿಸಿ.

3.ಮೊಟ್ಟೆಯ ಹಳದಿಯನ್ನು ಜೇನಿನೊಂದಿಗೆ ಬೆರೆಸಿ ಮಸಾಜ್ ಮಾಡಿ ಅರ್ಧಗಂಟೆಯನಂತರ ತೊಳೆದರೆ ಕೂದಲು ದಟ್ಟವಾಗುತ್ತದೆ.

3.ಬಾದಾಮಿ ಎಣ್ಣೆಯಿಂದ ಮೂರು ನಾಲ್ಕು ಬಾರಿ ನೆತ್ತಿಯನ್ನು ಮಸಾಜ್ ಮಾಡಿದರೆ ಕೂದಲುದುರುವಿಕೆಯು ಕಡಿಮೆಯಾಗುತ್ತದೆ.

4.ಬೊಕ್ಕತಲೆಯಿದ್ದರೆ ಅಲ್ಲಿಗೆ ನೀರುಳ್ಳಿ ರಸವನ್ನು ಚೆನ್ನಾಗಿ ತಿಕ್ಕಿ, ತದನಂತರ ಜೇನನ್ನು ಲೇಪಿಸುವುದರಿಂದ ಕೂದಲು ಬೆಳೆಯುವುದು.

5.ಸಮಾನ ಪ್ರಮಾಣದಲ್ಲಿ ಬೆಚ್ಚಗಿನ ಹರಳೆಣ್ಣೆ ಮತ್ತು ಬಾದಾಮಿ ಎಣ್ಣೆಯನ್ನು ಬೆರೆಸಿ ವಾರಕ್ಕೊಂದು ಬಾರಿ ಹಚ್ಚಿ ಮಸಾಜ್ ಮಾಡಿದರೆ ಕೂದಲು ಉದ್ದವಾಗುವುದು.

6.ನೆಲ್ಲಿಕಾಯಿಯ ಹುಡಿಯೊಂದಿಗೆ ಮೊಟ್ಟೆಯನ್ನು ಸೇರಿಸಿ ಹಚ್ಚಿ ಅರ್ಧಗಂಟೆಯ ನಂತರ ತೊಳೆದರೆ ಕೂದಲು ನಯವಾಗುತ್ತದೆ.

7.ಲಿಂಬೆಹಣ್ಣಿನ ರಸವನ್ನು ನೆತ್ತಿಗೆ ಹಚ್ಚಿ ಮಸಾಜ್ ಮಾಡುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ.

8.ಲಿಂಬೆ ಬೀಜ ಮತ್ತು ಕರಿಮೆಣಸಿನ ಕಾಳನ್ನು ಸಮ ಪ್ರಮಾಣದಲ್ಲಿ ಪುಡಿಮಾಡಿ, ಅಲ್ಪ ನೀರು ಸೇರಿಸಿ ನೆತ್ತಿಗೆ ಹಚ್ಚುವುದರಿಂದ ಬೊಕ್ಕತಲೆ ನಿವಾರಣೆಯಾಗುತ್ತದೆ.

9.ಬಿಸಿ ಆಲಿವ್ ಎಣ್ಣೆ, ಜೇನು ಮತ್ತು ಒಂದು ಟೀ ಚಮಚ ದಾಲ್ಚೀನಿ ಹುಡಿಯನ್ನು ನೀರಿನೊಂದಿಗೆ ಮಿಶ್ರಮಾಡಿ ತಲೆಗೆ ಹಚ್ಚಿದರೆ ಕೂದಲು ಕಪ್ಪಾಗುತ್ತದೆ.

10.ಕೊತ್ತಂಬರಿ ಸೊಪ್ಪಿನ ರಸವನ್ನು ನೆತ್ತಿಗೆ ಹಚ್ಚುವುದರಿಂದ ನೆತ್ತಿಗೆ ತಂಪಾಗಿ ಕೂದಲು ಬೆಳೆಯಲು ಸಹಾಯ ಮಾಡುತ್ತದೆ.

11.ನಾಲ್ಕು ಟೀ ಚಮಚ ಮದರಂಗಿ ಎಲೆಯೊಂದಿಗೆ 1 ಕಪ್ ಸಾಸಿವೆ ಎಣ್ಣೆಯನ್ನು ಕುದಿಸಿ.ತಣಿದ ನಂತರ ಅದನ್ನು ಸೋಸಿ ಬಾಟಲಿಯಲ್ಲಿ ಹಾಕಿಡಿ. ಇದನ್ನು ದಿನಾ ಹಚ್ಚುವುದರಿಂದ ಕೂದಲು ದಟ್ಟವಾಗಿ ಮತ್ತು ಕಪ್ಪಾಗಿ ಬೆಳೆಯುತ್ತದೆ.

12.ಬಾಳೆಹಣ್ಣಿನ ರಸಾಯನ,ಜೇನು ,ಮೊಸರು, ಮತ್ತು ಕೆನೆಹಾಲನ್ನು ಸೇವಿಸಿದರೆ ಕೂದಲು ಬೆಳೆಯುತ್ತದೆ.

13.ದಿನವೂ ಜೀರಿಗೆ ಅಥವಾ ಕೊತ್ತಂಬರಿ ನೀರಿನ ಸೇವನೆ ಕೂದಲಿನ ಪೋಷಣೆಗೆ ಅತ್ಯುತ್ತಮ.

14.ಕೂದಲು ಬಣ್ಣಗೆಟ್ಟಿದ್ದರೆ ಅಥವಾ ಅತಿಯಾಗಿ ಉದುರುತ್ತಿದ್ದರೆ ಕ್ಯಾರೆಟ್ ರಸವನ್ನು ಸೇವಿಸುವುದು ಒಳ್ಳೆಯದು.

15.ಮದರಂಗಿಯನ್ನು ಮೊಟ್ಟೆಯೊಂದಿಗೆ ಮಿಶ್ರಮಾಡಿ ತಲೆಗೆ ಹಚ್ಚುವುದರಿಂದ ಕೂದಲಿಗೆ ಹೊಳಪು ಮತ್ತು ಶಕ್ತಿ ದೊರೆಯುತ್ತದೆ.

rockinggirl.mamtha
VIP
VIP

Female
Number of posts: 471
Age: 17
Profession: student
MAJA POINTS MAJA POINTS: 3478
Registration date: 2009-07-03

View user profile

Back to top Go down

Re: Beauty tips for girls

Post by rockinggirl.mamtha on Mon 14 Sep - 11:16:57

ಸ್ಥೂಲಕಾಯ ತಪ್ಪಿಸಲು ಸುಲಭೋಪಾಯ

PTI
ಇಂದಿನ ವೇಗಪ್ರಪಂಚದಲ್ಲಿ ಅನಿಯಮಿತ ಆಹಾರ ಸೇವನೆ ಮತ್ತು ದೈಹಿಕ ವ್ಯಾಯಾಮದ ಕೊರತೆ, ಶಿಸ್ತುರಹಿತ ಜೀವನ ಶೈಲಿಯಿಂದಾಗಿ ಬೊಜ್ಜು ಮೈನವರ ಸಂಖ್ಯೆ ದಿನೇದಿನೇ ಏರುತ್ತಿದೆ. ಕೆಲವು ಸುಲಭೋಪಾಯಗಳನ್ನು ಅನುಸರಿಸವ ಮೂಲಕ ದೇಹದಲ್ಲಿ ಬೊಜ್ಜು ಶೇಖರಣೆಯಾಗುವುದನ್ನು ತಡೆಯಬಹುದು. ಹೇಗೆಂದರೆ, ಈ ಕೆಳಗಿನ ಸುಲಭ ವಿಧಾನಗಳ ಮೂಲಕ.

ಅವುಗಳಲ್ಲಿ ಮೊದಲನೆಯದು, ಪ್ರತಿದಿನದ ಆಹಾರದಲ್ಲಿ ಸಿಂಹ ಪಾಲು ತಾಜಾ ಹಣ್ಣು ಮತ್ತು ತರಕಾರಿಗಳಿಗಿರಲಿ. ಎರಡನೆಯದು, ನಿರಂತರ ವ್ಯಾಯಾಮ. ಮೂರನೆಯದು, ಕರಿದ ತಿಂಡಿಗಳು, ಮಸಾಲೆ ಪದಾರ್ಥಗಳು, ಮಾಂಸಾಹಾರ, ಮೊಟ್ಟೆ, ದ್ವಿದಳ ಧಾನ್ಯಗಳು, ಸಂಸ್ಕರಿಸಿದ ಹಿಟ್ಟು, ಪಾಲಿಶ್ ಮಾಡಿದ ಅಕ್ಕಿ, ಐಸ್ ಕ್ರೀಂ, ಜಂಕ್‌ಫುಡ್, ಫಾಸ್ಟ್‌ಫುಡ್‌ಗಳಿಂದ ದೂರವಿರಿ.

ಇವುಗಳೊಂದಿಗೆ, ಪ್ರತಿದಿನ ಮುಂಜಾನೆ ಒಂದು ಲೋಟ ಹದಾ ಬಿಸಿ ನೀರಿಗೆ ನಿಂಬೆರಸ ಮತ್ತು ಒಂದು ಚಮಚ ಜೇನುತುಪ್ಪವನ್ನು ಹಾಕಿಕೊಂಡು ಕುಡಿಯುವುದರಿಂದ ಅಥವಾ ಟೊಮ್ಯಾಟೊ ಜ್ಯೂಸ್ ಅಥವಾ ಸೌತೇಕಾಯಿ ಜ್ಯೂಸನ್ನು ನಿಯಮಿತವಾಗಿ ಸೇವಿಸುವುದರಿಂದ ಸಹ ಬೊಜ್ಜನ್ನು ಗಣನೀಯ ಪ್ರಮಾಣದಲ್ಲಿ ಕರಗಿಸಬಹುದು.

ಸ್ವಲ್ಪ ಬಾಯಿಕಟ್ಟಿ ಮತ್ತು ಸ್ವಲ್ಪ ಶ್ರಮಪಡಿ. ಕೆಲವೇ ಸಮಯದಲ್ಲಿ ಬೊಜ್ಜು ಕರಗಿ ಮೊದಲಿನ ಸೌಂದರ್ಯಕ್ಕೆ ಮರಳುತ್ತೀರಿ.

rockinggirl.mamtha
VIP
VIP

Female
Number of posts: 471
Age: 17
Profession: student
MAJA POINTS MAJA POINTS: 3478
Registration date: 2009-07-03

View user profile

Back to top Go down

Re: Beauty tips for girls

Post by rockinggirl.mamtha on Mon 14 Sep - 11:19:07

ಮುದ್ದಾದ ಪಾದಗಳು ಸೌಂದರ್ಯದ ಲಕ್ಷಣ

ನಿಮ್ಮ ಇಡೀ ದೇಹದ ಭಾರವನ್ನು ಹೊತ್ತುಕೊಂಡು ತಿರುಗುವುದು ನಿಮ್ಮ ಕಾಲುಗಳು. ಆದರೆ ಹೆಚ್ಚು ನಿರ್ಲಕ್ಷ್ಯಕ್ಕೊಳಗಾಗುವ ಅಂಗವೂ ಕಾಲುಗಳೇ. ಆದರೆ ಪಾದಗಳ ಆರೋಗ್ಯ ಮತ್ತು ಸೌಂದರ್ಯಕ್ಕಾಗಿ ಪಾದಗಳ ಆರೈಕೆ ಬಹುಮುಖ್ಯವಾಗಿದೆ.

ಪಾದಗಳ ಚರ್ಮ ತುಂಬ ಸೂಕ್ಷ್ಮವಾಗಿದ್ದು ನಿಯಮಿತ ಆರೈಕೆ ಅತ್ಯಗತ್ಯ. ಕೆಲವು ಸರಳ ವಿಧಾನಗಳಿಂದ ಕಾಲು ಹಾಗೂ ಪಾದಗಳ ಆರೈಕೆ ಮಾಡಬಹುದು.ಹಿಮ್ಮಡಿಗಳಲ್ಲಿ ದಡ್ಡುಗಟ್ಟಿದ ಚರ್ಮವನ್ನು ತೆಗೆದು ಹಾಕಿ.

ಇದಕ್ಕಾಗಿ ಪ್ಯೂಮಿಕ್ ಸ್ಟೋನ್‌ಗಳನ್ನು ಬಳಸಬಹುದು. ಅಥವಾ ಯಾವುದಾದರೂ ಸ್ಕಿನ್ ಲೋಶನ್‌ಅನ್ನು ಧಾರಾಳವಾಗಿ ಬಳಸಿ ಮೃದುವಾಗಿ ಮಸಾಜ್ ಮಾಡಿ.

ಒಂದು ಬಕೆಟ್ ಅಥವಾ ಟಬ್‌ನಲ್ಲಿ ಪಾದಗಳು ಮುಳುಗುವಷ್ಟು ಪ್ರಮಾಣದಲ್ಲಿ ಬಿಸಿನೀರು ತೆಗೆದುಕೊಂಡು ಅದಕ್ಕೆ ಒಂದು ಟೀಸ್ಪೂನ್‌ ಉಪ್ಪು ಸೇರಿಸಿ. ಒಂದೆರಡುತೊಟ್ಟು ಡೆಟ್ಟಾಲ್ ಮತ್ತು ಸ್ವಲ್ಪ ಶಾಂಪೂ ಸೇರಿಸಿ ಪಾದಗಳನ್ನು ಈ ನೀರಿನಲ್ಲಿಡಿ.

ಹತ್ತು ನಿಮಿಷದ ಬಳಿಕ ಪಾದಗಳನ್ನು ನೀರಿನಿಂದ ತೆಗೆದು ಶುಭ್ರ ಬಟ್ಟೆಯಿಂದ ಬೆರಳುಗಳ ನಡು ಸೇರಿದಂತೆ ಚೆನ್ನಾಗಿ ಒಣಗಿಸಿ. ಕಾಲುಗುರುಗಳನ್ನು ಕತ್ತರಿಸಿ. ಶೇಪ್ ಕೊಡಿ. ಫೂಟ್ ಸ್ಕಿನ್ ಅಥವಾ ಯಾವುದಾದರೂ ಕ್ರೀಮ್ ಬಳಸಿ ಮೃದುವಾಗಿ ಮಸಾಜ್ ಮಾಡಿ.

ಬಳಿಕ ಬೇಕಿದ್ದರೆ ನೇಲ್ ಪಾಲಿಶ್ ಹಚ್ಚಿ. ನೇಲ್ ಪಾಲಿಶ್ ಹಚ್ಚುವ ಮುನ್ನ ಉಗುರಿನಲ್ಲಿ ನೀರಿನ ಪಸೆ ಅಥವಾ ಕ್ರೀಂ ಉಳಿಯದಂತೆ ಶುಚಿಗೊಳಿಸಿ.

ವಾರಕ್ಕೊಂದು ಸಲ ಅಥವಾ ಹದಿನೈದು ದಿನಗಳಿಗೊಮ್ಮೆ ಈ ಕ್ರಮವನ್ನು ಅನುಸರಿಸುವ ಮೂಲಕ ಪಾದಗಳ ಆರೋಗ್ಯ ಕಾಪಾಡಬಹುದು.

rockinggirl.mamtha
VIP
VIP

Female
Number of posts: 471
Age: 17
Profession: student
MAJA POINTS MAJA POINTS: 3478
Registration date: 2009-07-03

View user profile

Back to top Go down

Re: Beauty tips for girls

Post by rockinggirl.mamtha on Mon 14 Sep - 11:20:22

ಬೆರಳು ಉಗುರುಗಳ ಆರೈಕೆ-ಮ್ಯಾನಿಕ್ಯೂರ್

ನಿಮ್ಮ ಮುಖದಷ್ಟೇ ಕೈ, ಉಗುರುಗಳಿಗೂ ಪ್ರಾಮುಖ್ಯತೆ ನೀಡುವುದು ಸೌಂದರ್ಯದ ದೃಷ್ಠಿಯಿಂದಲೂ ಆರೋಗ್ಯದ ದೃಷ್ಠಿಯಿಂದಲೂ ಅಗತ್ಯ. ಇದಲ್ಲದೇ ದಣಿದ ಕೈಗಳಿಗೆ ಒಂದಿಷ್ಟು ಆರೈಕೆ, ಮಾಲೀಸು ಕೈಗಳಿಗೆ ಮತ್ತು ಉಗುರಿಗೆ ಆರಾಮ ನೀಡುತ್ತದೆ.

ಇದು ವೇಗದ ಜಗತ್ತು. ಸದಾಕಾಲ ಒಂದಿಲ್ಲೊಂದು ಕಾರ್ಯದಲ್ಲಿ ನಿರತರಾಗಿರುವ ಕಾರಣ ಆಧುನಿಕ ಮಹಿಳೆಗೆ ಸೌಂದರ್ಯಗಾರಗಳಿಗೆ ತೆರಳಲು ಸಮಯದ್ದೇ ಸಮಸ್ಯೆ.ಅಂತಹ ಮಹಿಳೆಯರು ಮನೆಯಲ್ಲೇ ಕಡಿಮೆ ವೆಚ್ಚದಲ್ಲಿ ಸ್ವಯಂ ಮ್ಯಾನಿಕ್ಯೂರ್ ಮಾಡಿಕೊಳ್ಳಬಹುದು. ಮನೆಯಲ್ಲೆ ಮ್ಯಾನಿಕ್ಯೂರ್ ಮಾಡುವ ವಿಧಾನ ಹೀಗಿದೆ.

ಮೊದಲಿಗೆ ಉಗುರಿನಲ್ಲಿರುವ ನೇಲ್‌ಪಾಲಿಶನ್ನು ಹತ್ತಿ ಉಂಡೆಗಳು ಹಾಗೂ ನೇಲ್ ಪಾಲಿಶ್ ರಿಮೂವರ್‌ ಬಳಸಿ ತೆಗೆಯಿರಿ.ಉಗುರನ್ನು ಬೇಕಿರುವ ಆಕಾರಕ್ಕೆ ಕತ್ತರಿಸಿ ನೈಲ್ ಫೈಲ್ ಅಥವಾ ಶಾರ್ಪನರ್ ಬಳಸಿ ಶೇಪ್ ಕೊಡಿ.

ಒಂದು ಅಗಲವಾದ ಟಬ್‌ನಲ್ಲಿ ಕೈ ಮುಳುಗಿಸಲು ಸಾಧ್ಯವಿರುವಷ್ಟು ಬಿಸಿನೀರು ತೆಗೆದುಕೊಳ್ಳಿ. ನೀರಿಗೆ ಒಂದು ಚಮಚ ಉಪ್ಪು, ಸ್ವಲ್ಪ ಶಾಂಪೂ, ಒಂದೆರಡು ತೊಟ್ಟು ಡೆಟ್ಟಾಲ್, ಚಿಟಿಕೆ ಫೇಸ್ ಬ್ಲೀಚ್ ಪೌಡರ್, ಮೂರ್ನಾಲ್ಕು ತೊಟ್ಟು ನಿಂಬೆ ರಸ ಸೇರಿಸಿ ಎರಡೂ ಕೈಯನ್ನು ಹತ್ತು ನಿಮಿಷಗಳ ಕಾಲ ಮುಳುಗಿಸಿಡಿ.

ನೀರು ತಣ್ಣಗಾಗುತ್ತಲೇ, ಮಧ್ಯೆ ಎರಡು ಬಾರಿ ಬಿಸಿನೀರು ಸೇರಿಸಿ. ಕೈಯನ್ನು ಮ್ಯಾನಿಕ್ಯೂರ್ ಬ್ರಶ್ ಬಳಸಿ ಹಗುರವಾಗಿ ತಿಕ್ಕಿ ತೊಳೆಯಿರಿ. ಉಗುರುಗಳನ್ನು ಶುಚಿಗೊಳಿಸಿ. ನೀರಿನಿಂದ ಕೈ ತೆಗೆದು ಶುಚಿಯಾದ ಟವೆಲಿನಲ್ಲಿ ಒದ್ದೆ ತೆಗೆಯಿರಿ.

ಬಳಿಕ ಉಗುರುಗಳಿಗೆ ಕ್ಯುಟಿಕಲ್ ರಿಮೂವರ್ ಕ್ರೀಮ್ ಹಚ್ಚಿರಿ. ದಡ್ಡುಕಟ್ಟಿದ ಚರ್ಮವನ್ನು ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಈ ಚರ್ಮವನ್ನು ಕತ್ತರಿಸಬೇಡಿ. ಬಳಿಕ ಹ್ಯಾಂಡ್ ಲೋಷನ್ ಬಳಸಿ ಇನ್ನೊಂದು ಕೈಯಿಂದ ಅಂಗೈಗಳು, ಹಿಂಭಾಗ ಸೇರಿದಂತೆ ಮುಂಗೈ ತನಕ ಮೃದುವಾಗಿ ಮಸಾಜ್ ಮಾಡಿ. ಇದು ರಕ್ತ ಸಂಚಾರವನ್ನು ಉತ್ತಮಗೊಳಿಸುತ್ತದೆ. ಬಳಿಕ ಬಿಸಿ ನೀರಿನಲ್ಲಿ ಟವೆಲೊಂದನ್ನು ಮುಳುಗಿಸಿ ಹಬೆ ಕೊಡಿ. ಎರಡೂ ಕೈಗಳಿಗೂ ಈ ವಿಧಾನವನ್ನೇ ಅನುಸರಿಸಿ.

ಬಳಿಕ ಉಗುರುಗಳಲ್ಲಿ ಮೆತ್ತಿರುವ ಕ್ರೀಮ್ ಅಥವಾ ಲೋಶನ್ ಅನ್ನು ಹತ್ತಿಯ ಉಂಡೆಗಳಿಂದ ಶುಚಿಗೊಳಿಸಿ. ನೇಲ್ ಪಾಲಿಶ್ ರಿಮೂವರ್‌ನಿಂದ ಮತ್ತೊಮ್ಮೆ ಉಗುರನ್ನು ಶುಚಿಗೊಳಿಸಿ ಬೇಕಾದ ಬಣ್ಣದ ನೇಲ್ ಪಾಲಿಶ್ ಹಚ್ಚಿ. ನೇಲ್ ಪಾಲಿಶ್ ಹಚ್ಚುವಾಗ ಮೊದಲಿಗೆ ಉಗುರಿನ ನಡುವಿಗೆ ಉದ್ದಕ್ಕೆ ಹಚ್ಚಿ ಬಳಿಕ ಬದಿಗಳನ್ನು ತುಂಬಿ. ಒಂದು ಕೋಟ್ ಹಚ್ಚಿ ಒಣಗಿದ ಬಳಿಕ ನಂತರದ ಕೋಟ್ ಹಚ್ಚಿ. ಮೂರು ಕೋಟ್ ಹಚ್ಚಿದರೆ ಚೆನ್ನಾಗಿರುತ್ತದೆ.

ನೇಲ್ ಪಾಲಿಶ್‌ಗಳನ್ನು ಫ್ರಿಜ್‌ನಲ್ಲಿ ಇರಿಸಿ. ಬಾಟಲಿಯ ಮುಚ್ಚಳ ಅಂಟಿಕೊಳ್ಳುವುದನ್ನು ತಪ್ಪಿಸಲು ಅದರ ಸುತ್ತ ಸ್ವಲ್ಪ ವ್ಯಾಸ್‌‌ಲೀನ್ ಹಚ್ಚಿಡಿ.ಹದಿನೈದು ದಿನಗಳಿಗೊಮ್ಮೆ ಅಥವಾ ತಿಂಗಳಿಗೊಮ್ಮೆ ನಿಮ್ಮ ಕೈಗಳಿಗೆ ಒಂದಿಷ್ಟು ಆರೈಕೆ ನೀಡಿ.

rockinggirl.mamtha
VIP
VIP

Female
Number of posts: 471
Age: 17
Profession: student
MAJA POINTS MAJA POINTS: 3478
Registration date: 2009-07-03

View user profile

Back to top Go down

Re: Beauty tips for girls

Post by rockinggirl.mamtha on Mon 14 Sep - 11:21:17

ವೃದ್ಧಾಪ್ಯ ರೋಗಗಳಿಗೆ 'ಅಣಬೆ'- ಚೀನಿಚಿಕಿತ್ಸೆ


ಅಣಬೆಯನ್ನು ಆಹಾರವಾಗಿ ಬಳಸುವಂತೆ ಆರೋಗ್ಯರಂಗದಲ್ಲಿ ಥೆರಫಿ ಮಾಧ್ಯಮವಾಗಿ ಬಳಸುವುದೂ ಇದೆ. ಪ್ರೋಟೀನ್‌ಯುಕ್ತ ಆಹಾರವಾಗಿ ಕಳೆದ ಎರಡೂವರೆ ದಶಕದಲ್ಲಿ ಬಳಸುತ್ತಿದ್ದ ಅಣಬೆಗೆ ಇಂದು ವಿವಿಧ ಇತರ ಬೇಡಿಕಗಳೂ ಇವೆ.

ವೃದ್ದಾಪ್ಯದಲ್ಲಿ ಬರುವ ವಿವಿಧ ರೋಗಗಳಿಗೆ ಅಣಬೆಯನ್ನು ಬಳಸಿ ಸಮರ್ಪಕ ಪರಿಹಾರ ಕಾಣಬಹುದು ಎಂಬುದನ್ನು ಚೀನಿ ವೈದ್ಯ ತಜ್ಞರು ಕಂಡು ಕೊಂಡಿದ್ದಾರೆ.ಚೀನೀಯರು ಗ್ಯಾನೊ ಎಂಬ ಅಣಬೆ ಪ್ರಬೇಧವನ್ನು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಪರಿಪಾರವಾಗಿ ಬಳಸುತ್ತಾರೆ.

ರೋಗ ರುಜಿನ ನಿವಾರಣೆಗೆ, ದೇಹದಾರ್ಢ್ಯತೆ ಹೆಚ್ಚಿಸಲು, ರೋಗನಿರೋಧಕ ಶಕ್ತಿ ನಿವಾರಿಸಲು, ಆಯುಷ್ಯವೃದ್ಧಿಗೆ ವಿವಿಧ ಅಣಬೆ ಪ್ರಬೇಧಗಳನ್ನು ಮಾಧ್ಯಮವಾಗಿ ಬಳಸಿ ಔಷಧ ನೀಡುತ್ತಾರೆ. 38 ಸಾವಿರ ಅಣಬೆ ಪ್ರಬೇಧಗಳು ವಿಶ್ವದಲ್ಲಿವೆ. ಇವುಗಳಲ್ಲಿ ಗ್ಯಾನೋಡರ್ಮಾ ಎಂದು ಇಂಗ್ಲಿಷ್‌ ಹೆಸರಿರುವ ಅಣಬೆಯನ್ನು ಚೀನೀಯರು ಲಿಂಗ್‌ಝೀ ಎಂದು ಕರೆಯುತ್ತಾರೆ.

ವೃದ್ಧರಲ್ಲಿ ಸಾಮಾನ್ಯವಾಗಿ ಕಾಣಿಸುವ ವಿವಿಧ ರೋಗಗಳನ್ನು ಸಮರ್ಪಕವಾಗಿ ನಿವಾರಿಸಲು ಗ್ಯಾನೋ ಡರ್ಮಿ ಅಣಬೆಯ ಔಷಧಿಯಿಂದ ಸಾಧ್ಯ ಎಂಬುದು ಮನದಟ್ಟಾಗಿದೆ. ಅಂಗಾಂಗಳ ನಡುಕವಿರುವ ಪಾರ್ಕಿನ್ಸೋನಿಸಮ್‌ ವ್ಯಾಧಿ ನಿಯಂತ್ರಣ, ನಡುಕ ನಿವಾರಿಸಲು ಸಾಧ್ಯ.

ಪಾರ್ಕಿನ್‌ಸನ್‌ ವ್ಯಾಧಿಯೊಂದಿಗೆ ಕಾಣಿಸುವ ಮನಃಕ್ಲೇಷ, ಖಿನ್ನತೆ ಇತ್ಯಾದಿಗಳಿಂದ ಈ ಅಣಬೆ ಚಿಕಿತ್ಸೆಯಿಂದ ನಿವಾರಣೆ ಹೊಂದಲಾಗಿದೆ. ಆಸ್ಟಿಯೊ ಆರ್ಥ್ರೈಟಿಸ್‌ ಎಂಬ ಸಂಧಿನೋವು ನಿಯಂತ್ರಣಕೊಳ್ಳುತ್ತದೆ. ಜರ್ಜರಿತ ದೇಹದಲ್ಲಿ ಬಲ ತುಂಬುವುದು. ಅರ್ಧಾಯುಷ್ಯದ ಬಳಿಕ ಕಾಣಿಸುವ ಎಲುಬು ಸವೆತದ ಕಾಲು ನೋವು ತಹಬಂದಿಗೆ ಬರುತ್ತದೆ.

ಕಿವಿಯಲ್ಲಿ ಗುಂಯ್‌ ಶಬ್ದ ನಿವಾರಣೆಗೂ ಇದರಿಂದ ಚುಕಿತ್ಸೆ ಲಭ್ಯ. ಹಲವಾರು ರೋಗಗಳಿಗೆ ವೃದ್ಧಾಪ್ಯ ದೇಹ ಸಮಸ್ಯೆಗಳಿಗೆ ಗ್ಯಾನೋ ಅಣಬೆ ಔಷಧ ಚಿಕಿತ್ಸೆ ಫಲಪ್ರದವಾಗಿದೆ.

rockinggirl.mamtha
VIP
VIP

Female
Number of posts: 471
Age: 17
Profession: student
MAJA POINTS MAJA POINTS: 3478
Registration date: 2009-07-03

View user profile

Back to top Go down

Re: Beauty tips for girls

Post by rockinggirl.mamtha on Mon 14 Sep - 11:22:54

ಚಿರ ಯೌವನಕ್ಕೆ ಚರ್ಮ ಸೌಂದರ್ಯ

ದೇಹ ಆರೋಗ್ಯದಲ್ಲಿ ಚರ್ಮದ ಬಣ್ಣ, ಗುಣ, ಕಾಂತಿ ಇತ್ಯಾದಿಗಳು ಗಮನಾರ್ಹವಾಗಿವೆ. ಸುಕ್ಕುಗಟ್ಟಿದ, ಕಪ್ಪು ದಬ್ಬೆಗಳೆದ್ದು, ಸುಣುಗು (ಹೊಟ್ಟು) ಏಳುವ ಚರ್ಮ ಹೊಂದಿದ ವ್ಯಕ್ತಿಯು ಅನಾರೋಗ್ಯಪೀಡಿತನಂತೆ ತೋರುತ್ತಾನೆ.

ಮಹಿಳೆಯರಂತೂ ಚರ್ಮದ ಸಂರಕ್ಷಣೆ, ನಿರ್ವಹಣೆಯಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಚೈತನ್ಯದಿಂದ ಕೂಡಿದ ಚರ್ಮ ಯೌವನದ ಲಕ್ಷಣ. ಪ್ರಾಯ ಎಷ್ಟೇ ಆಗಿರಬಹುದು ಚರ್ಮದಲ್ಲಿ ಸುಕ್ಕು ಬಿದ್ದಿಲ್ಲವಾದರೆ ಇನ್ನು ಕಿರಿಯವರಾಗಿ ಕಾಣಿಸಿಕೊಳ್ಳಬಹುದು. ಹವಾಮಾನಕ್ಕೆ ತಕ್ಕಂತೆ ಚರ್ಮದ ರಕ್ಷಣೆ, ಶುಚೀಕರಣ, ಇನ್ನಿತರ ವಿಷಯಗಳು ಮಹತ್ವದ್ದಾಗಿರುತ್ತವೆ.

ಮೆದುವಾಗಿರುವ ಶುಭ್ರ ಚರ್ಮ, ಅದರಲ್ಲಿ ನುಣುಪಾದ ರೋಮ ಕೂಪಗಳು ಆರೋಗ್ಯವಂತಿಕೆಯ ಲಕ್ಷಣ. ಚಳಿಗಾಲದಲ್ಲಿ ಚರ್ಮ ಬಿರುಕು ಬೀಳದಂತೆ ತೈಲಾಂಶ ಯುಕ್ತ ಲೇಪಗಳನ್ನು ಬಳಸುವುದು. ಬೇಸಗೆಯಲ್ಲಿ ಸೂರ್ಯನ ಬಿರುಕಿರಣಗಳನ್ನು ತಡೆಯಲು ಸನ್‌ ಸ್ಕ್ರೀನ್‌ಲೇಪಗಳನ್ನು ಬಳಸುವುದು ಉತ್ತಮ.

ಬೇಸಗೆಯಲ್ಲಿ ಬಿಸಿಲು ದಬ್ಬೆಗಳೆದ್ದು ಚರ್ಮ ಅಂದಗೆಡದಂತೆ , ಬೆವರು ಹುಣ್ಣು, ಫಂಗಸ್‌ರೋಗಗಳು ಬಾಧಿಸದಂತೆ ತಡೆಯುವ ಅಗತ್ಯವಿದೆ. ಹತ್ತಿಯ ಶುಭ್ರ ಬಟ್ಟೆಗಳನ್ನು ಧರಿಸುವುದು. ಮಧ್ಯಾಹ್ನದ ಬಿರುಬಿಸಿಲಿಗೆ ಮೈಯೊಡ್ಡದಿರುವುದು, ಛತ್ರಿಗಳ ಬಳಕೆ ಇತ್ಯಾದಿಗಳಿಂದ ಚರ್ಮದ ತಾಜಾ ತನ ಉಳಿಸಲು ಸಾಧ್ಯ. ಚರ್ಮದ ಅಕಾಲ ವೃದ್ಧಾಪ್ಯ ಬಾಧಿಸದಿರಲು ಚರ್ಮ ರಕ್ಷಣೆಯ ಪೋಷಕಾಂಶಗಳ ಸೇವನೆಯೂ ಅನಿವಾರ್ಯ.
ದೇಹ ಆರೋಗ್ಯದಲ್ಲಿ ಚರ್ಮದ ಬಣ್ಣ, ಗುಣ, ಕಾಂತಿ ಇತ್ಯಾದಿಗಳು ಗಮನಾರ್ಹವಾಗಿವೆ. ಸುಕ್ಕುಗಟ್ಟಿದ, ಕಪ್ಪು ದಬ್ಬೆಗಳೆದ್ದು, ಸುಣುಗು (ಹೊಟ್ಟು) ಏಳುವ ಚರ್ಮ ಹೊಂದಿದ ವ್ಯಕ್ತಿಯು ಅನಾರೋಗ್ಯಪೀಡಿತನಂತೆ ತೋರುತ್ತಾನೆ.

ಮಹಿಳೆಯರಂತೂ ಚರ್ಮದ ಸಂರಕ್ಷಣೆ, ನಿರ್ವಹಣೆಯಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಚೈತನ್ಯದಿಂದ ಕೂಡಿದ ಚರ್ಮ ಯೌವನದ ಲಕ್ಷಣ. ಪ್ರಾಯ ಎಷ್ಟೇ ಆಗಿರಬಹುದು ಚರ್ಮದಲ್ಲಿ ಸುಕ್ಕು ಬಿದ್ದಿಲ್ಲವಾದರೆ ಇನ್ನು ಕಿರಿಯವರಾಗಿ ಕಾಣಿಸಿಕೊಳ್ಳಬಹುದು. ಹವಾಮಾನಕ್ಕೆ ತಕ್ಕಂತೆ ಚರ್ಮದ ರಕ್ಷಣೆ, ಶುಚೀಕರಣ, ಇನ್ನಿತರ ವಿಷಯಗಳು ಮಹತ್ವದ್ದಾಗಿರುತ್ತವೆ.

ಮೆದುವಾಗಿರುವ ಶುಭ್ರ ಚರ್ಮ, ಅದರಲ್ಲಿ ನುಣುಪಾದ ರೋಮ ಕೂಪಗಳು ಆರೋಗ್ಯವಂತಿಕೆಯ ಲಕ್ಷಣ. ಚಳಿಗಾಲದಲ್ಲಿ ಚರ್ಮ ಬಿರುಕು ಬೀಳದಂತೆ ತೈಲಾಂಶ ಯುಕ್ತ ಲೇಪಗಳನ್ನು ಬಳಸುವುದು. ಬೇಸಗೆಯಲ್ಲಿ ಸೂರ್ಯನ ಬಿರುಕಿರಣಗಳನ್ನು ತಡೆಯಲು ಸನ್‌ ಸ್ಕ್ರೀನ್‌ಲೇಪಗಳನ್ನು ಬಳಸುವುದು ಉತ್ತಮ.

ಬೇಸಗೆಯಲ್ಲಿ ಬಿಸಿಲು ದಬ್ಬೆಗಳೆದ್ದು ಚರ್ಮ ಅಂದಗೆಡದಂತೆ , ಬೆವರು ಹುಣ್ಣು, ಫಂಗಸ್‌ರೋಗಗಳು ಬಾಧಿಸದಂತೆ ತಡೆಯುವ ಅಗತ್ಯವಿದೆ. ಹತ್ತಿಯ ಶುಭ್ರ ಬಟ್ಟೆಗಳನ್ನು ಧರಿಸುವುದು. ಮಧ್ಯಾಹ್ನದ ಬಿರುಬಿಸಿಲಿಗೆ ಮೈಯೊಡ್ಡದಿರುವುದು, ಛತ್ರಿಗಳ ಬಳಕೆ ಇತ್ಯಾದಿಗಳಿಂದ ಚರ್ಮದ ತಾಜಾ ತನ ಉಳಿಸಲು ಸಾಧ್ಯ. ಚರ್ಮದ ಅಕಾಲ ವೃದ್ಧಾಪ್ಯ ಬಾಧಿಸದಿರಲು ಚರ್ಮ ರಕ್ಷಣೆಯ ಪೋಷಕಾಂಶಗಳ ಸೇವನೆಯೂ ಅನಿವಾರ್ಯ.

rockinggirl.mamtha
VIP
VIP

Female
Number of posts: 471
Age: 17
Profession: student
MAJA POINTS MAJA POINTS: 3478
Registration date: 2009-07-03

View user profile

Back to top Go down

Re: Beauty tips for girls

Post by rockinggirl.mamtha on Mon 14 Sep - 11:24:18

ಇಳಿ ಹರೆಯದಲ್ಲಿ ಏರುವ ಭಾರ


ಮೂವತ್ತು ಕಳೆಯಿತೆಂದರೆ ಮಹಿಳೆಯರಿಗೆ ಸೊಂಟದ ಸುತ್ತಳತೆ ಹೆಚ್ಚುತ್ತದೆ. ಮುಖದ ರೂಪ ಬದಲುತ್ತದೆ. ಆಕೃತಿಯಲ್ಲಿ ಏರುಪೇರಾಗುತ್ತದೆ. ಆದರೆ, ಒಂದಷ್ಟು ಕಾಳಜಿ ವಹಿಸಿದರೆ, 48ರ ಹರೆಯದಲ್ಲೂ 28ರಂತೆ ಕಾಣಬಹುದು.

ಮೊದಲನೆಯದಾಗಿ ದೇಹ ಹಾಗೂ ಮನಸ್ಸನ್ನು ಆರೋಗ್ಯವಾಗಿಟ್ಟುಕೊಳ್ಳುವುದು. ಆರೋಗ್ಯಕರ ಚಟುವಟಿಕೆಗಳು, ಸಣ್ಣಪುಟ್ಟ ವ್ಯಾಯಾಮ ಮತ್ತು ಸೂಕ್ತ ಸಮಯಕ್ಕೆ ಸರಿಯಾಗಿ ಸಮತೂಕದ ಆಹಾರ ಸೇವನೆ- ಇಷ್ಟನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಅರ್ಧ ಸಮಸ್ಯೆ ಬಗೆಹರಿದಂತೆ.

ಮಾನಸಿಕ ಒತ್ತಡ ಹಾಗೂ ವಿಷಣ್ಣತೆಗಳು ಬಳಿಗೆ ಸುಳಿಯದಂತೆ ಜಾಗೃತೆ ವಹಿಸಬೇಕು. ಮುಖವು ಮನಸ್ಸಿನ ಕನ್ನಡಿ ಇದ್ದಂತೆ. ಮಾನಸಿಕ ಅನಾರೋಗ್ಯ ದೈಹಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದೇ ಅನೇಕ ಸಮಸ್ಯೆಗಳಿಗೆ ರಹದಾರಿಯಾಗುವ ಅಪಾಯವೂ ಇದೆ.

ಆದಷ್ಟೂ ಜಂಕ್ ಫುಡ್, ಮಾಂಸಾಹಾರ ಹಾಗೂ ಬೊಜ್ಜು ಹೆಚ್ಚುವಂತಹ ಆಹಾರಗಳಿಂದ ದೂರವಿದ್ದರೆ ಒಳಿತು. ಹಸಿರು ತರಕಾರಿಗಳು, ಸೊಪ್ಪು, ತಾಜಾ ಹಣ್ಣುಗಳು, ಮೊಳಕೆ ಕಾಳುಗಳು ಆಹಾರದಲ್ಲಿ ಹೆಚ್ಚಾಗಿ ಇದ್ದರೆ ಅದರ ಪರಿಣಾಮವೇ ಬೇರೆ. ಬೆಣ್ಣೆ ತೆಗೆದ ಮಜ್ಜಿಗೆಯಲ್ಲೂ ಔಷಧೀಯ ಗುಣಗಳಿರುತ್ತವೆ. ಸಾಧ್ಯವಿರುವಷ್ಟು ಮನೆ ಆಹಾರವನ್ನು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ.

ದಿನನಿತ್ಯ ಕನಿಷ್ಠಪಕ್ಷ ಐದು ಲೀಟರ್ ಶುದ್ಧವಾದ ನೀರು ಕುಡಿಯಬೇಕು. ಇದು ತ್ವಚೆಯ ಆರೋಗ್ಯಕ್ಕೆ ಅತ್ಯಗತ್ಯ. ಆರೋಗ್ಯಕರ ದೇಹಕ್ಕೆ ನಿದ್ರೆಯೂ ಅಷ್ಟೆ ಅವಶ್ಯಕ. ಮಿತಿಗಿಂತ ಕಡಿಮೆ ಹಾಗೂ ಮಿತಿಗಿಂತ ಹೆಚ್ಚಿನ ನಿದ್ರೆಯೂ ಆರೋಗ್ಯಕ್ಕೆ ಒಳ್ಳೆಯದಲ್ಲ.

ಮಧ್ಯಾಹ್ನದ ವೇಳೆ ಗಂಟೆಗಟ್ಟಲೆ ಗೊರಕೆಹೊಡೆದರೆ ಇದು ಬೊಜ್ಜನ್ನು ಹೆಚ್ಚಿಸುತ್ತದೆ. ಆದರೆ 15 ಅಥವಾ 30 ನಿಮಿಷಗಳ ಕಾಲದ ಒಂದು ಕೋಳಿ ನಿದ್ರೆ ಆರೋಗ್ಯಕ್ಕೂ ಒಳ್ಳೆಯದು ಮತ್ತು ಇದು ಆಯಾಸ ಪರಿಹರಿಸಿ ಪ್ರಶಾಂತ ಮುಖಭಾವ ಒದಗಿಸುತ್ತದೆ.

ಅಂದ ಹಾಗೆ ಬೇಗ ಮಲಗಿ, ಬೇಗ ಏಳುವ ಅಭ್ಯಾಸ ರೂಢಿಸಿಕೊಂಡರೆ ಇನ್ನೂ ಒಳಿತು. ಆದಷ್ಟೂ ಮನದಲ್ಲಿ ಉತ್ತಮ ಭಾವನೆಗಳೇ ಸರಿದಾಡುವಂತೆ ನೋಡಿಕೊಳ್ಳಬೇಕು. ಶಾಂತ ಮನಸ್ಸೂ ಆರೋಗ್ಯಕರ ದೇಹಕ್ಕೆ ಅಷ್ಟೇ ಅಗತ್ಯ.

ಆರೋಗ್ಯವಂತ ಜೀವನಕ್ಕೆ ನಿಯಮಿತ ಆಹಾರ, ನಿದ್ರೆ ಹಾಗೂ ವಿಸರ್ಜನೆಗಳು ಬಹಳ ಅಗತ್ಯ.

rockinggirl.mamtha
VIP
VIP

Female
Number of posts: 471
Age: 17
Profession: student
MAJA POINTS MAJA POINTS: 3478
Registration date: 2009-07-03

View user profile

Back to top Go down

Re: Beauty tips for girls

Post by rockinggirl.mamtha on Mon 14 Sep - 11:25:57

ಹೆಚ್ಚು ಕಾಫಿ, ಟೀ ಕುಡಿಯುವುದರಿಂದ ಹಾಗೂ ಸಿಗರೇಟು ಸೇದುವುದರಿಂದ ತುಟಿಗಳು ಕಪ್ಪಾಗುತ್ತದೆ. ಹಾಗಾಗಿ ಇಂಥ ಅಬ್ಯಾಸ ಕಡಿಮೆ ಮಾಡಿ.

ಹೆಚ್ಚು ಹಸಿ ಹಣ್ಣು ತರಕಾರಿಗಳನ್ನು ಸೇವಿಸುತ್ತಿರಿ. ಹಾಗೂ ಗುಲಾಬಿ ದಳಗಳನ್ನು ಚೆನ್ನಾಗಿ ಅರೆದು ತುಟಿಗಳಿಗೆ ಲೇಪಿಸಿದರೆ ತುಟಿಗಳು ಪಿಂಕ್ ಆಗಿ ಉಳಿಯುತ್ತದೆ.

ಬಾಯಿಯ ದುರ್ವಾಸನೆಗೆ
ಗೋರಂಟಿ ಗಿಡದ ಚಿಗುರೆಲೆಗಳನ್ನು ಚೆನ್ನಾಗಿ ಜಗಿದು ಉಗುಳಿದರೆ ಬಾಯಿಯ ದುರ್ವಾಸನೆ ಹೋಗುತ್ತದೆ.

ಬೆವರು ತಡೆಗೆ
ನೆಲ್ಲಿ ಕಾಯಿಯನ್ನು ಜಜ್ಜಿ ರಸ ತೆಗೆದು ಅದನ್ನು ದಿನಾಲು ಅಂಗೈ, ಅಂಗಾಲಿಗೆ ಲೇಪಿಸಿದರೆ ಬೆವರುವುದು ನಿಲ್ಲುತ್ತದೆ.

ಗಾಯದ ಕಲೆಗೆ
ಜೇನುತುಪ್ಪವನ್ನು ಗಾಯದ ಕಲೆಗಳ ಮೇಲೆ ಹಚ್ಚುತ್ತಿದ್ದರೆ ಕಲೆಗಳು ನಿವಾರಣೆಯಾಗುತ್ತವೆ.

ಮೊಡವೆಗೆ
ಹಿಂಗನ್ನು ನೀರಿನಲ್ಲಿ ತೇದು ಮೊಡವೆಗಳಿಗೆ ಹಚ್ಚುತ್ತಿದ್ದರೆ ಮೊಡವೆಗಳು ನಿವಾರಣೆಯಾಗುತ್ತವೆ.

ಮಸಾಜು
ತಲೆಗೆ ನಿಯಮಿತವಾಗಿ ಎಣ್ಣೆ ಹಚ್ಚಿ ಮಸಾಜು ಮಾಡುವುದರಿಂದ ರಕ್ತ ಸಂಚಾರ ಹೆಚ್ಚಾಗಿ ಕೂದಲು ದೃಢವಾಗುತ್ತದೆ.

rockinggirl.mamtha
VIP
VIP

Female
Number of posts: 471
Age: 17
Profession: student
MAJA POINTS MAJA POINTS: 3478
Registration date: 2009-07-03

View user profile

Back to top Go down

Re: Beauty tips for girls

Post by rockinggirl.mamtha on Mon 14 Sep - 11:33:35

ತೂಕ
ದನಲೂ ಬೆಳಿಗ್ಗೆ ಬರಿ ಹೊಟ್ಟೆಯಲ್ಲಿ ಒಂದು ಹಸಿ ಟೊಮೆಟೊ ತಿನ್ನುತ್ತಾ ಬಂದರೆ ಕ್ರಮೇಣ ತೂಕ ಕಡಿಮೆಯಾಗುತ್ತದೆ.

ಕನ್ನಡಕ
ಬಿಸಿಲಿಗೆ ಹೋಗುವಾಗ ಕಣ್ಣಿಗೆ ತಂಪು ಕನ್ನಡಕ ಬಳಸುವ ರೂಡಿ ಮಾಡಿಕೊಳ್ಳಿ. ಇದರಿಂದ ಕಣ್ಣನ್ನು ರಕ್ಷಿಸಿಕೊಳ್ಳಬಹುದು.

ದಿನನಿತ್ಯ ವ್ಯಾಯಾಮ
ದಿನನಿತ್ಯ ವ್ಯಾಯಾಮ ಮಾಡುವುದರಿಂದ ಶರೀರದಲ್ಲಿ ಉಲ್ಲಾಸವುಂಟಾಗಿ ಮುಖ ಪ್ರಫುಲ್ಲವಾಗುತ್ತದೆ. ದಿನನಿತ್ಯದ ವ್ಯಾಯಾಮವು ಶರೀರವನ್ನು ಸಮತೋಲನದಲ್ಲಿಡಲು ಸಹಕರಿಸುತ್ತದೆ.

ಉಗುರು
ಉಗುರು ಕಚ್ಚುವ ಅಭ್ಯಾಸವನ್ನು ನಿಲ್ಲಿಸಿ. ಇದು ಉಗುರಿನ ಸೌಂದರ್ಯವನ್ನು ಕೆಡಿಸುತ್ತದೆ. ಉಗುರು ಮತ್ತು ಕೈಗಳನ್ನು ದಿನಲೂ ಚೆನ್ನಾಗಿ ತೊಳೆಯುತ್ತಿರಿ.

ಕೃತಕ ಉಗುರು
ಕೃತಕ ಉಗುರುಗಳನ್ನು ಬೆಳೆಸಬೇಡಿ. ಇದರಿಂದ ಫಂಗಸ್ ಆಗುವ ಸಾಧ್ಯತೆಯಿದೆ

ಒಣ ಚರ್ಮಕ್ಕೆ
ಒಣಗಿದ ಚರ್ಮಕ್ಕೆ ಚರ್ಮದ ನಿಜವಾದ ನೈಸರ್ಗಿಕ ಎಣ್ಣೆ ಅಂಶ ಉಳಿಯಲು ಸೋಪಿನ ಬದಲಾಗಿ ಕ್ಲೆನ್ಸರ್ ಬಳಸಿ.

rockinggirl.mamtha
VIP
VIP

Female
Number of posts: 471
Age: 17
Profession: student
MAJA POINTS MAJA POINTS: 3478
Registration date: 2009-07-03

View user profile

Back to top Go down

Re: Beauty tips for girls

Post by rockinggirl.mamtha on Mon 14 Sep - 11:37:57

ಮೊಡವೆ
ಮೊಡವೆಗಳನ್ನು ನಿಮ್ಮ ಕೈಯಿಂದ ಅದುಮುವುದು, ಒತ್ತುವುದು ಮಾಡುವುದರಿಂದ ಮೊಡವೆಗಳನ್ನು ತಡೆಗಟ್ಟಿ.

ಕೂದಲ ಆರೋಗ್ಯಕ್ಕೆ
ವಿಟಮಿನ್ ಹೊಂದಿರುವ ಆಹಾರ ಸೇವಿಸುವುದರಿಂದ ನಿಮ್ಮ ಕೂದಲನ್ನು ಆರೋಗ್ಯದಿಂದ ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.

ಒಣ ಕೂದಲಿಗೆ
ಒಣ ಕೂದಲು ಹೊಂದಿರುವವರು ದಿನವೂ ಶಾಂಪೂ ಬಳಸುವುದನ್ನು ತಪ್ಪಿಸಿದರೆ ಕೂದಲಿಗೆ ಒಳ್ಳೆಯದು.

ಮುಲ್ಲು ಸೌತೆ
ಕಣ್ಣಿನ ಸುತ್ತ ಕಪ್ಪು ಕಲೆಗಳು ಉಂಟಾದರೆ ಕಣ್ಣುಗಳ ಮೇಲೆ ಮುಲ್ಲು ಸೌತೆಯ ವೃತ್ತಕಾರದ ತುಂಡನ್ನು ಇಟ್ಟರೆ ಕಣ್ಣಿಗೆ ತಂಪಾಗುತ್ತದೆ.

ಬಾದಾಮು ಎಣ್ಣೆ
ತ್ವಚೆಗೆ ಬಾದಾಮಿನ ಎಣ್ಣೆ ಸವರಿ ಮಸಾಜು ಮಾಡಿ ತಣ್ಣೀರಲ್ಲಿ ಸ್ನಾನ ಮಾಡಿದರೆ ಚರ್ಮವು ಹೊಳಪಿನಿಂದ ಕೂಡಿ ಸುಂದರವಾಗಿರುತ್ತದೆ.

ಚರ್ಮ ವ್ಯಾಧಿ
ಅರಸಿನವನ್ನು ಅರೆದು ಜೇನು ತುಪ್ಪ ಹಾಗೂ ತ್ವಚೆಗೆ ಲೇಪಿಸುವುದರಿಂದ ತುರಿಕೆ ಮೊದಲಾದ ಚರ್ಮ ವ್ಯಾಧಿಗಳು ದೂರವಾಗುವುದು.

ಮುಖದ ಕಾಂತಿಗೆ
ಮುಖಕ್ಕೆ ದಿನಾ ಅರಸಿನದೊಂದಿಗೆ ಶ್ರೀಗಂಧ, ಹಾಲು ಸೇರಿಸಿ ಹಚ್ಚುವುದರಿಂದ ಮುಖ ಕಾಂತಿಯುಕ್ತವಾಗಿ ಮೊಡವೆ ನಿವಾರಣೆಯಾಗುವುದು.

ಕಡಲೆಹಿಟ್ಟು
ಬೆಸಿಗೆ ಕಾಲದಲ್ಲಿ ಕಡಲೆಹಿಟ್ಟು ಬಳಸಿ ತಣ್ಣೀರಲ್ಲಿ ಮುಖ ತೊಳೆಯುತ್ತಿದ್ದರೆ ತ್ವಚೆ ಶುಚಿಯಾಗಿ ತಾಜಾತನದ ಅನುಭವವಾಗುತ್ತದೆ.

ಸೇಬುಹಣ್ಣು
ಪ್ರತಿದಿನ ಊಟದ ನಂತರ ಸೇಬುಹಣ್ಣನ್ನು ತಿನ್ನುವುದರಿಂದ ಹಲ್ಲುಗಳು ಹೊಳೆಯುತ್ತದೆ.

rockinggirl.mamtha
VIP
VIP

Female
Number of posts: 471
Age: 17
Profession: student
MAJA POINTS MAJA POINTS: 3478
Registration date: 2009-07-03

View user profile

Back to top Go down

Re: Beauty tips for girls

Post by rockinggirl.mamtha on Mon 14 Sep - 11:43:49

ಮಚ್ಚೆ
ಪಪ್ಪಾಯಿ ಕಾಯಿಯ ಸಿಪ್ಪೆಯಿಂದ ನಿಯಮಿತವಾಗಿ ಉಜ್ಜಿಕೊಳ್ಳುತ್ತಿದ್ದರೆ ಮಚ್ಚೆಗಳು ನಿವಾರಣೆಯಾಗುತ್ತದೆ.

ಹಾಲಿನ ಕೆನೆ
ಹಾಲಿನ ಕೆನೆಯನ್ನು ಪ್ರತಿದಿನ ಮುಖಕ್ಕೆ ಹಚ್ಚಿಕೊಳ್ಳುತ್ತಿದ್ದರೆ ತ್ವಚೆ ಮೃದುವಾಗುತ್ತದೆ ಅಲ್ಲದೆ ನಂಜುನಿರೋಧಕ ಶಕ್ತಿ ಪಡೆಯುತ್ತದೆ ಜೊತೆಗೆ ಕಪ್ಪು ಕಲೆ ಹಾಗೂ ನೆರಿಗೆಗಳು ಮಾಯವಾಗುತ್ತದೆ.

ತ್ವಚೆಯ ಹೊಳಪು
ಟೊಮ್ಯಾಟೋ ಕತ್ತರಿಸಿ ಪ್ರತಿದಿನ ಮುಖದ ಮೇಲೆ ತಿಕ್ಕುವುದರಿಂದ ತ್ವಚೆ ಹೊಳಪು ಪಡೆಯುತ್ತದೆ.

ಕಪ್ಪುವೃತ್ತ
ಸೌತೆಕಾಯಿಯನ್ನು ಅತಿ ತೆಳುವಾಗಿ ಕತ್ತರಿಸಿ 10 ನಿಮಿಷ ಕಣ್ಣಿನ ರೆಪ್ಪೆ ಮೇಲೆ ಇಟ್ಟುಕೊಂಡರೆ ಕಣ್ಣಿನ ಸುತ್ತಲಿನ ಕಪ್ಪುವೃತ್ತ ಮಾಯವಾಗುತ್ತದೆ.

ತಣ್ಣೀರು ಸ್ನಾನ
ಬೆಸಗೆಯಲ್ಲಿ ಉರಿಬಿಸಲಲ್ಲಿ ಸ್ನಾನ ಮಾಡಬಾರದು. ನೆರಳಲ್ಲಿ ತಣ್ಣೀರು ಸ್ನಾನದಿಂದ ಬೆವರು ಗುಳ್ಳೆಗಳು ಏಳುವುದಿಲ್ಲ.

ಮೊಡವೆ
ಮುಖದಲ್ಲಿ ಮೊಡವೆಗಳ ಉಪಟಳವಿದ್ದರೆ ಎಣ್ಣೆ ಕೊಬ್ಬಿನಂಶದ ಜಿಡ್ಡು ಆಹಾರ ಸೇವಿಸದಿರಿ.

ಗಾಯದ ಕಲೆ
ಗಾಯದ ಕಲೆಗಳು ಇದ್ದರೆ ಅದರ ಮೇಲೆ ಹಳೆಯ ಜೇನು ಹಚ್ಚುತ್ತಿದ್ದರೆ ಕಲೆಗಳು ಮಾಸುತ್ತವೆ.

ನಿಂಬೆಹಣ್ಣಿನ ರಸ
ಕೂದಲಿಗೆ ಕಪ್ಪುಬಣ್ಣ ಬರಲು ನಿಂಬೆಹಣ್ಣಿನ ರಸವನ್ನು ಕೊಬ್ಬರಿ ಎಣ್ಣೆಯೊಂದಿಗೆ ಮಿಶ್ರಮಾಡಿ ಹಚ್ಚಿರಿ.

ಕೂದಲಿಗೆ ಕೊಬ್ಬರಿ ಎಣ್ಣೆ ಉಪಯುಕ್ತ
ಕೂದಲು ಸಿಕ್ಕಾಗಿ ಗಂಟು ಬೀಳದಂತೆ ಸ್ನಾನವಾದೊಡನೆ ಗಾಳಿಯಾಡಿಸಿ ಒಣಗಿಸಿ. ಕೂದಲಿಗೆ ಕೊಬ್ಬರಿ ಎಣ್ಣೆ ಉಪಯುಕ್ತ.

ಮೃದುವಾದ ಚರ್ಮಕ್ಕೆ
ನಿದ್ರೆಯಿಂದ ಎದ್ದ ಬಳಿಕ ಮತ್ತು ಸ್ನಾನದ ಮಾಡಿದ ಸಂದರ್ಭ ಚರ್ಮವು ಅತ್ಯಂತ ಮೃದುವಾಗಿರುತ್ತದೆ. ಹಾಗಾಗಿ ಚರ್ಮವನ್ನು ಯಾವತ್ತೂ ಒರಟಾಗಿ ಉಜ್ಜಬಾರದು. ಸ್ನಾನದ ಬಳಿಕ ಇರುವ ನೀರನ್ನು ಮಿದುವಾದ ಬಟ್ಟೆಯಿಂದ ಮೆಲ್ಲನೆ ಒರೆಸಿ ಒಣಗಲು ಬಿಡಬೇಕು.

ಕಡಿಮೆ ಎಣ್ಣೆಯ ಅಂಶದ ಆಹಾರ
ಮೊಡವೆಗಳು ಬರದಂತೆ ಬಿಸಿನೀರಿನಲ್ಲಿ ಆಗಾಗ ಮುಖ ತೊಳೆಯುವುದು,ಕೊಬ್ಬು, ಎಣ್ಣೆಯ ಅಂಶ ಕಡಿಮೆ ಇರುವ ಆಹಾರ ಸೇವಿಸಬೇಕು. ಅಗತ್ಯ ಚಿಕಿತ್ಸೆ, ಪರಿಚರ್ಯೆ ನೀಡಬೇಕು.

ಸೌಂದರ್ಯ ಚಿಕಿತ್ಸೆ
ಸೌಂದರ್ಯ ಚಿಕಿತ್ಸೆ ಸಂದರ್ಭ ತೀಕ್ಷ್ಣ ರಾಸಾಯನಿಕಗಳು, ಬ್ಲೀಚ್ ಬಳಕೆ ಸಲ್ಲದು. ಅವುಗಳು ತತ್ ಕ್ಷಣಕ್ಕೆ ಮುಖಕ್ಕೆ ಕಾಂತಿಯನ್ನು ನೀಡುತ್ತವೆಯಾದರೂ, ಕೆಲವು ವರ್ಷಗಳ ಬಳಿಕ ಮುಖದ ಚರ್ಮದ ವಿನ್ಯಾಸವು ಕಪ್ಪುಕಟ್ಟಬಹುದು ಮತ್ತು ಚರ್ಮ ಸುಕ್ಕುಗಟ್ಟಬಹುದು. ಯಾವತ್ತೂ ಗಿಡಮೂಲಿಕೆಗಳ ಸೌಂದರ್ಯ ಚಿಕಿತ್ಸೆ ಅಥವಾ ಗೃಹೋತ್ಪನ್ನಗಳಿಗೆ ಮೊರೆ ಹೋಗುವುದು ಯಾವತ್ತೂ ಒಳಿತು.

ಸನ್‌ ಸ್ಕ್ರೀನ್‌
ಬೇಸಗೆಯಲ್ಲಿ ಚರ್ಮದ ಮೇಲೆ ಬಿಸಿಲು ಹುಣ್ಣು ಏಳದಂತೆ ಸನ್‌ ಸ್ಕ್ರೀನ್‌ ಕ್ರೀಮ್‌ ಬಳಸಬಹುದು. ಮುಖ ಕಪ್ಪಾಗದಂತೆ ಕ್ರೀಮ್‌ಗಳನ್ನು ಬಳಸಬಹುದು, ಕ್ಯಾಪ್‌, ಕೊಡೆಗಳನ್ನು ಬಳಸಿ ಬಿಸಿಲಿನ ನೇರ ಆಕ್ರಮಣದಿಂದ ರಕ್ಷಣೆ ಹೊಂದಬಹುದು. ಏರು ಬಿಸಿಲಿಗ ಮೈ ಒಡ್ಡದಿರುವುದೂ ಉತ್ತಮ.

rockinggirl.mamtha
VIP
VIP

Female
Number of posts: 471
Age: 17
Profession: student
MAJA POINTS MAJA POINTS: 3478
Registration date: 2009-07-03

View user profile

Back to top Go down

Re: Beauty tips for girls

Post by rockinggirl.mamtha on Mon 14 Sep - 11:56:35

ಮುಖದಲ್ಲಿ ಮೊಡವೆಗಳಿದ್ದರೆ
ಮುಖದಲ್ಲಿ ಮೊಡವೆಗಳಿದ್ದರೆ ಅವುಗಳನ್ನು ಕೀಳಬಾರದು. ಕಪ್ಪು ಕಲೆ ಉಳಿಯುತ್ತದೆ. ಮುಖದ ಸಹಜ ಸೌಂದರ್ಯಕ್ಕೆ ಹಾನಿಯಾಗುತ್ತದೆ.

ಜೇನುತುಪ್ಪ
ಅರಸಿನವನ್ನು ನುಣ್ಣಗೆ ಅರೆದು ಜೇನುತುಪ್ಪ ಹಾಗೂ ತ್ವಚೆಗೆ ಲೇಪಿಸುವುದರಿಂದ ತುರಿಕೆ ಮೊದಲಾದ ಚರ್ಮ ವ್ಯಾದಿಗಳು ದೂರವಾಗುವುದು.

ವೀಳ್ಯದೆಳೆ
ವೀಳ್ಯದೆಳೆಯನ್ನು ನುಣ್ಣಗೆ ಅರೆದು ಕೊಬ್ಬರಿಯೊಂದಿಗೆ ಮಿಶ್ರಮಾಡಿ ತಲೆಕೂದಲಿಗೆ ಹಚ್ಚಿಕೊಂಡರೆ ಕೂದಲು ಉದುರುವುದು ನಿಲ್ಲುವುದು.

ಮೊಸರು
ಮುಖಕ್ಕೆ ಬೆಳಗ್ಗೆ ಮೊಸರು ಹಚ್ಚುವುದರಿಂದ ತ್ವಚೆ ಶುಚಿಯಾಗಿ ಮೊಡವೆಗಳೆಲುವುದಿಲ್ಲ ಜೊತೆಗೆ ಚರ್ಮ ನಯವಾಗುತ್ತದೆ.

ವಿನೆಗರ್
ರಾತ್ರಿ ಮಲಗುವಾಗ ಹತ್ತಿಯಲ್ಲಿ ಎರಡು ಅಥವಾ ಮ‌‌ೂರು ಹನಿ ವಿನೆಗರ್ ಅದ್ದಿ ತುಟಿಗಳಿಗೆ ಮೃದುವಾಗಿ ಒತ್ತಿದರೆ ಅವು ಕೆಂಪಾಗಿ ಸುಂದರವಾಗುತ್ತದೆ.

ಹರಳೆಣ್ಣೆ
ದಿನರಾತ್ರಿ ಹುಬ್ಬುಗಳಿಗೆ ಹರಳೆಣ್ಣೆ ಸವರಿ ತೋರು ಬೆರಳಿನಿಂದ ನಯವಾಗಿ ಮಸಾಜು ಮಾಡಿದರೆ ಹುಬ್ಬುಗಳು ಬಿಲ್ಲಿನಂತೆ ಅಂದವಾಗುತ್ತದೆ.

ತುಟಿಗಳಿಗೆ ದನದ ತುಪ್ಪ
ತುಟಿಗಳಿಗೆ ದನದ ತುಪ್ಪವನ್ನು ದಿನಾ ರಾತ್ರಿ ಸವರಿದರೆ ತುಟಿಗಳು ಮೃದುವಾಗಿ ನೈಜವಾದ ಬಣ್ಣದಿಂದ ಕೂಡಿ ಸುಂದರವಾಗುತ್ತದೆ.

ರಕ್ತಚಂದನ
ರಕ್ತಚಂದನ ಅರೆದು ಹಾಲಿನೊಂದಿಗೆ ಮಿಶ್ರಮಾಡಿ ಲೇಪಿಸುವುದರಿಂದ ಮೊಡವೆಗಳು ಇಲ್ಲದಾಗಿ ಮುಖ ಅಂದವಾಗುತ್ತದೆ.

ಆಹಾರ ಸೇವನೆಯ ನಂತರ
ಆಹಾರ ಸೇವಿಸಿದ ನಂತರ ಮ‌ೂಲಂಗಿ, ಕ್ಯಾರೆಟ್, ಸೌತೆಕಾಯಿ ಅಥವಾ ಸೇಬು ಹಣ್ಣು ಜಗಿದು ತಿನ್ನುವುದರಿಂದ ಬಾಯಿ ಶುಚಿಯಾಗಿರುತ್ತದೆ.

ಕೂದಲು ಉದುರುವಿಕೆ
ನೀರಿಗೆ ಉಪ್ಪು ಬೆರೆಸಿ ಆ ನೀರಿನಿಂದ ತಲೆಯನ್ನು ತೊಳೆದುಕೊಂಡರೆ ತಲೆಕೂದಲು ಉದುರುವುದಿಲ್ಲ.

ಮೊಡವೆ
ಸೀಬೆಯ ಎಲೆಗಳನ್ನು ನುಣ್ಣಗೆ ಅರೆದು ಮೊಡವೆಗಳಿಗೆ ಹಚ್ಚಿದರೆ ಒಂದು ವಾರದೊಳಗೆ ಮೊಡವೆಗಳು ನಿವಾರಣೆಯಾಗುತ್ತದೆ.

ಬಿಳಿಕೂದಲು ತಡೆಯಬೇಕೇ?
ಕೂದಲಿಗೆ ಬೆಣ್ಣೆ ಹಚ್ಚುತ್ತಿದ್ದರೆ, ಅಪ್ರಾಪ್ತ ವಯಸ್ಸಿನಲ್ಲಿ ನೆರೆಕೂದಲು ಉಂಟಾಗುವುದನ್ನು ತಪ್ಪಿಸಬಹುದು.

ತೆಳ್ಳಗಾಗಬೇಕೇ?
ಧಡೂತಿ ದೇಹವಿದ್ದವರು ಪ್ರತಿದಿನವೂ ನಾಲ್ಕು ಟೀ ಚಮಚ ಜೇನುತುಪ್ಪವನ್ನು ಸೇವಿಸುತ್ತಾ ಬಂದರೆ ದೇಹದ ತೂಕ ಕಡಿಮೆಯಾಗುತ್ತದೆ.

ದಾಳಿಂಬೆ ಎಲೆ
ದಾಳಿಂಬೆ ಎಲೆಗಳನ್ನು ನುಣ್ಣಗೆ ಅರೆದು ಅದರಿಂದ ಅಂಗಾಂಗಗಳನ್ನು ತಿಕ್ಕಿ ಸ್ನಾನ ಮಾಡುವುದರಿಂದ ಶರೀರವು ಕಾಂತಿಯುತವಾಗುತ್ತದೆ ಮತ್ತು ಬೆವರಿನ ವಾಸನೆಯಿಂದ ಮುಕ್ತವಾಗುತ್ತದೆ.

ನಿಂಬೆಹಣ್ಣಿನ ರಸ
ನಿಂಬೆಹಣ್ಣಿನ ರಸವನ್ನು ಕೊಬ್ಬರಿ ಎಣ್ಣೆಯೊಂದಿಗೆ ಮಿಶ್ರಮಾಡಿ ಕೂದಲಿಗೆ ಹಚ್ಚಿದರೆ ಕೂದಲು ಕಪ್ಪಾಗುವುದು.

ಕೂದಲು
ಕೂದಲನ್ನು ದಿನಾಲೂ ಗಟ್ಟಿಯಾಗಿ ನೀವು ಕುಟ್ಟುತ್ತಿದ್ದರೆ ಆಗಾಗ ಕೂದಲನ್ನು ಸಡಿಲವಾಗಿ ಬಿಡುವ ಅಭ್ಯಾಸ ರೂಡಿಸಿಕೊಳ್ಳಿ.

ಕೂದಲು ಉದುರುವಿಕೆಗೆ
ಕೊಬ್ಬರಿ ಎಣ್ಣೆ ಬಳಸಿ ತಲೆನೆಟ್ಟಿಗೆ ಪ್ರತಿ ದಿನ ಚೆನ್ನಾಗಿ ಮಸಾಜ್ ಮಾಡಿದರೆ ಕೂದಲು ಅತಿಯಾಗಿ ಉದುರುವುದನ್ನು ತಡೆಗಟ್ಟೆಬಹುದು.

ಬೇಸಿಗೆ ಕಾಲದಲ್ಲಿ ಹತ್ತಿ ಬಟ್ಟೆ ಉತ್ತಮ
ಬೇಸಿಗೆ ಕಾಲದಲ್ಲಿ ಅದಷ್ಟೂ ಸಡಿಲವಾದ ಹತ್ತಿ ಬಟ್ಟೆಗಳನ್ನು ಬಳಸಿದರೆ ವಾಯು ಸಂಚಾರ ಸರಿಯಾಗಿ ಆರೋಗ್ಯ ಉತ್ತಮವಾಗುತ್ತದೆ.

rockinggirl.mamtha
VIP
VIP

Female
Number of posts: 471
Age: 17
Profession: student
MAJA POINTS MAJA POINTS: 3478
Registration date: 2009-07-03

View user profile

Back to top Go down

Re: Beauty tips for girls

Post by rockinggirl.mamtha on Mon 14 Sep - 12:10:36

ಎಳೆನೀರು
ಎಳೆನೀರಿನಿಂದ ಕೆಲವು ವಾರಗಳು ಮುಖ ತೊಳೆಯುತ್ತಿದ್ದರೆ ಮೊಡವೆಗಳು ಮಾಯವಾಗುತ್ತವೆ.

ಕೇಶದ ಬೆಳವಣಿಗೆಗೆ
ನೆಲ್ಲಿಕಾಯಿಯನ್ನು ತೈಲದೊಡನೆ ಬೆರಸಿ ತಲೆಗೆ ಹಚ್ಚಿಕೊಂಡರೆ ಕೂದಲು ನೆರೆಯುವುದಿಲ್ಲ. ಕೇಶದ ಬೆಳವಣಿಗೆಗೆ ಸಹಾಯವಾಗುತ್ತದೆ.

ನೆಲ್ಲಿಕಾಯಿ ರಸ
ಬೆಟ್ಟದ ನೆಲ್ಲಿಕಾಯಿಯ ರಸವನ್ನು ಅಂಗೈಗೆ ಹಚ್ಚಿಕೊಂಡರೆ ಅತಿ ಬೆವರು ವಸರುವುದು ಸ್ಥಗಿತವಾಗುವುದು.

ಕೂದಲಿಗೆ ಬೆಣ್ಣೆ ಹಚ್ಚಿರಿ
ಕೂದಲಿಗೆ ಬೆಣ್ಣೆ ಹಚ್ಚುತ್ತಿದ್ದರೆ ಅಪ್ರಾಪ್ತ ವಯಸ್ಸಿನಲ್ಲಿ ನರೆ ಕೂದಲು ಉಂಟಾಗುವ ಸಾಧ್ಯತೆ ಇರುವದಿಲ್ಲ.

ಚಳಿಗೆ ಚರ್ಮದ ರಕ್ಷಣೆ
ಚಳಿಗೆಮುಖದ ಚರ್ಮ ಒಡೆದರೆ ಹಾಲಿನ ಕೆನೆಯನ್ನು ಹಚ್ಚಿಕೊಂಡರೆ ಶೀಘ್ರವೇ ಗುಣವಾಗುವುದು.

ಬಾದಾಮಿ ಬೀಜ
ಬಾದಾಮಿ ಬೀಜಗಳನ್ನು ಶುದ್ದವಾದ ಹಸುವಿನ ಹಾಲಿನೊಂದಿಗೆ ಅರೆದು ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಂಡರೆ ಆಕರ್ಷಣೆ ಬರುತ್ತದೆ.

ಹಾಲಿನ ಸ್ನಾನ
ಹಾಲಿನ ಸ್ನಾನವನ್ನು ಮಾಡಿದರೆ ಚರ್ಮ ಹೂವಿನಂತೆ ಮೆದುವಾಗುತ್ತದೆ.ಚರ್ಮ ಕಾಂತಿಯುತವಾಗುತ್ತದೆ.

ದೇಹಶಕ್ತಿಗೆ ಕುರಿಯ ಹಾಲು
ಕುರಿಯ ಹಾಲನ್ನು ದಿನನಿತ್ಯ ಸೇವಿಸುವುದರಿಂದ ದೇಹಶಕ್ತಿ ಅಧಿಕವಾಗುತ್ತದೆ.

ಚರ್ಮ ಕಾಂತಿಯುತವಾಗಲು
ಹಾಲಿನ ಸ್ನಾನವನ್ನು ಮಾಡಿದರೆ ಚರ್ಮ ಹೂವಿನಂತೆ ಮೆದುವಾಗುತ್ತದೆ. ಚರ್ಮ ಕಾಂತಿಯುತವಾಗುತ್ತದೆ.

ದೇಹಶಕ್ತಿ
ಕುರಿಯ ಹಾಲನ್ನು ದಿನನಿತ್ಯ ಸೇವಿಸುವುದರಿಂದ ದೇಹಶಕ್ತಿ ಅಧಿಕವಾಗುತ್ತದೆ.

ಕೂದಲು ಬೆಳ್ಳಗಾಗಿದ್ದರೆ
ಕೊಬ್ಬರಿ ಎಣ್ಣೆಗೆ ಮೆಂತ್ಯದ ಕಾಳನ್ನು ಹಾಕಿ ತಲೆಗೆ ಹಚ್ಚಿಕೊಂಡರೆ ಕೂದಲು ಬೆಳ್ಳಗಾಗುವುದನ್ನು ತಡೆಗಟ್ಟಬಹುದು.

ಬೆವರಿನ ಗುಳ್ಳೆಗಳಾಗಿದ್ದರೆ
ಬಿಸಿಲಿನಿಂದ ಬೆವರಿನ ಗುಳ್ಳೆಗಳಾಗಿದ್ದರೆ ಜೀರಿಗೆ ಪುಡಿಯನ್ನು ತೆಂಗಿನ ಹಾಲಿನಲ್ಲಿ ಕಲಸಿ ಗುಳ್ಳೆಗಳ ಮೇಲೆ ಹಚ್ಚಿದರೆ ಕಡಿಮೆಯಾಗುತ್ತದೆ.

ಮುಖದ ಕಾಂತಿಗೆ ಸೌತೆಕಾಯಿ
ಸೌತೆಕಾಯಿ ಹಚ್ಚಿ ಮುಖದ ಚರ್ಮದ ಮೇಲೆ ತಿಕ್ಕಿದರೆ ಮುಖ ಕಾಂತಿಯುತವಾಗುತ್ತದೆ.

ಮುಖದ ಕಾಂತಿಗೆ
ಬಾದಾಮಿ ಬೀಜಗಳನ್ನು ಶುದ್ಧವಾದ ಹಸುವಿನ ಹಾಲಿನೊಂದಿಗೆ ಅರೆದು ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಂಡರೆ ಆಕರ್ಷಣೆ ಬರುತ್ತದೆ.

ಹಾಲಿನ ಸ್ನಾನ
ಹಾಲಿನ ಸ್ನಾನವನ್ನು ಮಾಡಿದರೆ ಚರ್ಮ ಹೂವಿನಂತೆ ಮೃದುವಾಗುತ್ತದೆ. ಚರ್ಮ ಕಾಂತಿಯುತವಾಗುತ್ತದೆ.

ದೇಹಶಕ್ತಿ ಅಧಿಕವಾಗಲು
ಕುರಿಯ ಹಾಲನ್ನು ದಿನನಿತ್ಯ ಸೇವಿಸುವುದರಿಂದ ದೇಹಶಕ್ತಿ ಅಧಿಕವಾಗುತ್ತದೆ.

ಬೆಳ್ಳಗೆ ಕೂದಲು
ಕೊಬ್ಬರಿ ಎಣ್ಣೆಗೆ ಮೆಂತ್ಯದ ಕಾಳನ್ನು ಹಾಕಿ ತಲೆಗೆ ಹಚ್ಚಿಕೊಂಡರೆ ಕೂದಲು ಬೆಳ್ಳಗಾಗುವದನ್ನು ತಡೆಗಟ್ಟಬಹುದು.

ಬೆವರಿನ ಗುಳ್ಳೆಗಳಿಗೆ ಪರಿಹಾರ
ಬಿಸಿಲಿನಿಂದ ಬೆವರಿನ ಗುಳ್ಳೆಗಳಾಗಿದ್ದರೆ ಜೀರಿಗೆ ಪುಡಿಯನ್ನು ತೆಂಗಿನ ಹಾಲಿನಲ್ಲಿ ಕಲಸಿ ಗುಳ್ಳೆಗಳ ಮೇಲೆ ಹಚ್ಚಿದರೆ ಕಡಿಮೆಯಾಗುತ್ತದೆ.

ಹಾಲು, ಮೊಸರು ಅಗತ್ಯ
ಶುಷ್ಕ ಹಾಗೂ ಆರೋಗ್ಯಕರ ಚರ್ಮಕ್ಕೆ ಮೊಸರಿನ ಉಪಯೋಗ ಉತ್ತಮ. ಮುಖದ ಶುದ್ದಿಗಾಗಿ ಹಸಿಯ ಹಾಲನ್ನು ಉಪಯೋಗಿಸಿ. ಮುಲ್ತಾನಿ ಮಣ್ಣಿನಿಂದ ಮೈಗೆಲ್ಲ ಲೇಪಿಸಿಕೊಂಡು ಒಣಗಿದ ನಂತರ ಸ್ನಾನಮಾಡಬೇಕು.

ಮುಖದ ಬಗ್ಗೆ ಕಾಳಜಿ ಇರಲಿ
ಗಿಡಮೂಲಿಕೆಗಳಿಂದ ತಯಾರಾದ ಸೌಂದರ್ಯ ಸಾಧನಗಳನ್ನು ಉಪಯೋಗಿಸಿ. ಸೌಂದರ್ಯ ಸಾಧನಗಳ ಉಪಯೋಗ ಸಾಧ್ಯವಾದಷ್ಟು ಕಡಿಮೆ ಮಾಡಿ. ಇಡೀ ದಿನ ಮೇಕಪ್ನಲ್ಲಿದ್ದರೆ ರಾತ್ರಿ ಚೆನ್ನಾಗಿ ಮುಖ ತೊಳೆದು ಮಲಗಿ.

ಕೃತಕ ಸೌಂದರ್ಯ ಸಾಧನ ಬೇಡ
ಅತಿಯಾದ ಬಿಸಿಲು ಶರೀರಕ್ಕೆ ಅಪಾಯಕರ. ಇನ್ನೊಬ್ಬರು ಉಪಯೋಗಿಸಿದ ಸಾಧನಗಳನ್ನು ಉಪಯೋಗಿಸಬೇಡಿ. ರಾಸಾಯನಿಕ ಮತ್ತು ಕೃತಕ ಸೌಂದರ್ಯ ಸಾಧನಗಳಿಂದ ದೂರವಿರಿ.

ಸೂರ್ಯೋದಯದ ಬಿಸಿಲು
ಶಾರೀರಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಆಹಾರ ಸೇವಿಸಿ. ವಾರಕ್ಕೆ ಒಂದು ದಿನವಾದರು ಉಪವಾಸ ಕೈಗೊಳ್ಳಿ. ಸೂರ್ಯೋದಯದ ಬಿಸಿಲು ಶರೀರಕ್ಕೆ ಚೈತನ್ಯ ನೀಡುತ್ತದೆ.

ಚರ್ಮದ ಬಗ್ಗೆ ಕಾಳಜಿ ಇರಲಿ
ಚರ್ಮ ಶುದ್ದತೆ ನಿಯಮಿತವಾಗಿರಬೇಕು. ಬಿಸಿ ನೀರಿನ ಸ್ನಾನ ಉತ್ತಮ. ಋತುಮಾನಗಳಿಗೆ ತಕ್ಕಂತೆ ಉಡುಪನ್ನು ಧರಿಸಿ. ಅಹಾರ ವಿಹಾರಗಳು ನಿಮ್ಮ ಚರ್ಮದ ಮೇಲೆ ಪ್ರಭಾವ ಬೀರದಿರಲಿ.

rockinggirl.mamtha
VIP
VIP

Female
Number of posts: 471
Age: 17
Profession: student
MAJA POINTS MAJA POINTS: 3478
Registration date: 2009-07-03

View user profile

Back to top Go down

Re: Beauty tips for girls

Post by rockinggirl.mamtha on Mon 14 Sep - 12:20:08

ಕಣ್ಣಿನ ಕೆಳಬದಿಯ ಕಪ್ಪುಬಣ್ಣ
ಎಳನೀರು ಅಥವಾ ಪನ್ನೀರನ್ನು ಕಣ್ಣಿನ ಕೆಳಗೆ ಕಪ್ಪಾದ ಜಾಗಕ್ಕೆ ಹಾಕಿ ಮಸಾಜ್ ಮಾಡಬೇಕು. ಇದನ್ನು ಹತ್ತು ನಿಮಿಷಗಳಿಗೊಮ್ಮೆ ಮೂರುದಿನ ಮಾಡಿದರೆ ಕಣ್ಣಿನ ಕೆಳಬದಿಯ ಕಪ್ಪುಬಣ್ಣ ಮಾಯವಾಗುತ್ತದೆ.

ಹರಳೆಣ್ಣೆ
ಹರಳೆಣ್ಣೆಯನ್ನು ತಲೆಗೆ ಹಚ್ಚುವುದರಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ.

ಚರ್ಮದ ಕಾಂತಿ
ಕಡನೆಕಾಯಿ ಹಿಟ್ಟನ್ನು ಸೋಪಿಗೆ ಬದಲಾಗಿ ಬಳಸಿದರೆ ಚರ್ಮದ ಕಾಂತಿ ಹೆಚ್ಚಿ ಮೃದುವಾಗುತ್ತದೆ.

ಕೇಶದ ಬೆಳವಣಿಗೆ
ನೆಲ್ಲಿ ಕಾಯಿಯನ್ನು ತೈಲದೊಡನೆ ಬೆರಸಿ ತಲೆಗೆ ಹಚ್ಚಿಕೊಂಡರೆ ಕೂದಲು ನೆರೆಯುವದಿಲ್ಲ. ಕೇಶದ ಬೆಳವಣಿಗೆಗೆ ಸಹಾಯವಾಗುತ್ತದೆ.

ಆಹಾರದಲ್ಲಿ ಶಿಸ್ತು ಇರಲಿ
ಶಾರೀರಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಅಹಾರ ಸೇವಿಸಿ. ವಾರಕ್ಕೆ ಒಂದು ದಿನವಾದರೂ ಉಪವಾಸ ಕೈಗೊಳ್ಳಿ.

ಋತುವಿಗೆ ತಕ್ಕ ಉಡುಪು
ಬಿಸಿ ನೀರಿನ ಸ್ನಾನ ಉತ್ತಮ. ಋತುಮಾನಗಳಿಗೆ ತಕ್ಕಂತೆ ಉಡುಪನ್ನು ಧರಿಸಿದರೆ, ಚರ್ಮದ ಆರೋಗ್ಯ ಕಾಪಾಡಲು ಉತ್ತಮ. ಅಹಾರ ವಿಹಾರಗಳು ನಿಮ್ಮ ಚರ್ಮದ ಮೇಲೆ ಪ್ರಭಾವ ಬೀರದಿರಲಿ.

ಕೂದಲು ಉದ್ದವಾಗಿ ಬೆಳೆಯಲು
ಅಗತ್ಯವಾಗಿರುವಾಗ ಕೂದಲ ಕೊನೆಯನ್ನು ಕತ್ತರಿಸುವುದರಿಂದ ಕೂದಲು ಉದ್ದವಾಗಿ ಬೆಳೆಯುತ್ತದೆ.\

ಅರಶಿನ
ಮುಖಕ್ಕೆ ದಿನಾ ಅರಶಿನದೊಂದಿಗೆ ಶ್ರಿಗಂಧ,ಹಾಲು ಸೇರಿಸಿ ಹಚ್ಚುವುದರಿಂದ,ಮುಖ ಕಾಂತಿಯುಕ್ತವಾಗಿ ಮೊಡವೆ ನಿವಾರಣೆಯಾಗುತ್ತದೆ.

ಸೌಂದರ್ಯ ಪ್ರಸಾಧನ
ಸೌಂದರ್ಯ ಪ್ರಸಾಧನಗಳನ್ನು ಬಳಸುವ ಮೊದಲು ತಣ್ಣೀರಿನಿಂದ ತೊಳೆದು ಮಾಯಿಶ್ಚರೈಸರ್ ಹಚ್ಚುವುದರಿಂದ ಪ್ರಸಾಧನ ತುಂಬಾ ಹೊತ್ತು ಉಳಿಯುವುದು.

ತ್ವಚೆ ನುಣುಪು,
ಕಡಲೇ ಹಿಟ್ಟಿಗೆ ಸೌತೆ ರಸ ಬೆರೆಸಿ ಮುಖ ಹಾಗೂ ಕತ್ತಿಗೆ ಹಚ್ಚಿಕೊಂಡು 15 ನಿಮಿಷಗಳ ನಂತರ ಮುಖ ತೊಳೆದುಕೊಳ್ಳಿ. ಪ್ರತಿನಿತ್ಯ ಈ ರೀತಿ ಮಾಡಿದರೆ ತ್ವಚೆ ನುಣುಪು, ಕೋಮಲತೆ ಪಡೆಯುತ್ತದೆ.

ಸಹಜ ಸೌಂದರ್ಯ
ಕಡಲೇ ಹಿಟ್ಟು ಹಾಗೂ ಹೆಸರುಬೇಳೆ ಹಿಟ್ಟಿನೊಂದಿಗೆ ಅರಶಿನ ಬೆರೆಸಿ ಮುಖಕ್ಕೆ ಹಚ್ಚಿ ಒಂದು ಗಂಟೆ ಬಿಟ್ಟು ಮುಖ ತೊಳೆಯುವುದರಿಂದ ಮುಖ ಸಹಜ ಸೌಂದರ್ಯವನ್ನು ಪಡೆಯುತ್ತದೆ.

ಚರ್ಮವು ಕಾಂತಿಯುತ
ತುಳಸಿ ಎಲೆಗಳನ್ನು ಒಣಗಿಸಿ ಕುಟ್ಟಿ ಪುಡಿ ಮಾಡಿ, ನೀರಿನಲ್ಲಿ ಕಲಸಿ ಪ್ರತಿದಿನವೂ ಮುಖಕ್ಕೆ ಹಚ್ಚಿದರೆ ಒಂದು ತಿಂಗಳಲ್ಲಿ ನಿಮ್ಮ ಮುಖದ ಚರ್ಮವು ಕಾಂತಿಯುತವಾಗುವುದು.

ಕಲೆ ನಿವಾರಣೆ
ಒಂದು ಚಮಚ ತುಳಸಿ ರಸಕ್ಕೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ ದಿನವೂ ಸೇವಿಸುವುದರಿಂದ ಮುಖದ ಕಲೆ ನಿವಾರಣೆಯಾಗುತ್ತದೆ.

rockinggirl.mamtha
VIP
VIP

Female
Number of posts: 471
Age: 17
Profession: student
MAJA POINTS MAJA POINTS: 3478
Registration date: 2009-07-03

View user profile

Back to top Go down

Re: Beauty tips for girls

Post by rockinggirl.mamtha on Mon 14 Sep - 12:20:38

ಸೌಂದರ್ಯ ವರ್ಧನೆಗೆ ಸುಲಭ ಉಪಾಯಗಳು
ತಾನು ಸುಂದರಿಯಾಗಿ ಕಾಣಬೇಕೆಂದು ಯಾರು ತಾನೆ ಬಯಸುವುದಿಲ್ಲ? ಈ ಸಲಹೆಗಳನ್ನು ಪಾಲಿಸಿದಲ್ಲಿ ನಿಮ್ಮ ಸೌಂದರ್ಯ ವರ್ಧನೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

1. ಪ್ರತಿದಿನ ಸ್ವಲ್ಪ ತುಳಸಿ ರಸವನ್ನು ಜೇನುತುಪ್ಪದೊಡನೆ ಸೇವಿಸುತ್ತಿದ್ದರೆ ಮುಖದ ತೇಜಸ್ಸು ಹೆಚ್ಚುತ್ತದೆ ಅಲ್ಲದೆ ಮುಖದ ಮೇಲಿನ ಕಲೆಗಳೂ ಕೂಡ ಮಾಯವಾಗುತ್ತದೆ.

2.ಕಹಿ ಬೇವಿನ ಏಳೆಂಟು ಎಲೆಗಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ತುಸು ಉಗುರು ಬೆಚ್ಚಗಿರುವಾಗಲೇ ಮುಖ ತೊಳೆದುಕೊಳ್ಳುತ್ತಿದ್ದರೆ ಸೌಂದರ್ಯ ವೃದ್ಧಿಸುತ್ತದೆ ಅಲ್ಲದೆ ಸಿಡಿಬಿನ ಕಲೆಗಳು ಮಾಯವಾಗುತ್ತವೆ.

3. ಹಸಿ ಹಾಲನ್ನು ಮುಖ, ಕೈ, ಕಾಲು ಮತ್ತು ತಲೆಗೆ ಹಚ್ಚಿಕೊಂಡು ಅರ್ಧ ಗಂಟೆ ನಂತರ ಸ್ನಾನ ಮಾಡಿದರೆ ನ್ಯಾಚುರಲ್ ಕಂಡೀಶನರ್‌ನಂತೆ ಕೆಲಸ ಮಾಡುತ್ತದೆ ಮತ್ತು ಮುಖ ಹಾಗೂ ಕೂದಲಿನ ಹೊಳಪನ್ನು ಕಾಯ್ದಿರಿಸಿ ಸೌಂದರ್ಯ ಹೆಚ್ಚಲು ಸಹಕಾರಿಯಾಗುತ್ತದೆ.

4. ದಾಲ್ಚಿನ್ನಿ ಚೆಕ್ಕೆಗಳನ್ನು ಪುಡಿ ಮಾಡಿ ನಿಂಬೆರಸ ಸೇರಿಸಿ ಹಚ್ಚಿಕೊಂಡರೆ ಮೊಡವೆಗಳು ಮಾಯವಾಗುತ್ತದೆ.

5. ಕಡಲೇ ಹಿಟ್ಟಿಗೆ ಸೌತೆ ರಸ ಬೆರೆಸಿ ಮುಖ ಹಾಗೂ ಕತ್ತಿಗೆ ಹಚ್ಚಿಕೊಂಡು 15 ನಿಮಿಷಗಳ ನಂತರ ಮುಖ ತೊಳೆದುಕೊಳ್ಳಿ. ಪ್ರತಿನಿತ್ಯ ಈ ರೀತಿ ಮಾಡಿದರೆ ತ್ವಚೆ ನುಣುಪು, ಕೋಮಲತೆ ಪಡೆಯುತ್ತದೆ.

6. ಸೌತೆಕಾಯಿಯನ್ನು ಅತಿ ತೆಳುವಾಗಿ ಕತ್ತರಿಸಿ, ಅವುಗಳನ್ನು 10 ನಿಮಿಷ ಕಣ್ಣಿನ ರೆಪ್ಪೆ ಮೇಲೆ ಇಟ್ಟುಕೊಂಡರೆ ಕಣ್ಣಿನ ಸುತ್ತಲಿನ ಕಪ್ಪುವೃತ್ತ ಮಾಯವಾಗುತ್ತದೆ.

7. ಟೊಮ್ಯಾಟೋ ಕತ್ತರಿಸಿ ಪ್ರತಿದಿನ ಮುಖದ ಮೇಲೆ ತಿಕ್ಕುವುದರಿಂದ ತ್ವಚೆ ಹೊಳಪು ಪಡೆಯುತ್ತದೆ.

8. ಹಾಲಿನ ಕೆನೆಯನ್ನು ಪ್ರತಿದಿನ ಮುಖಕ್ಕೆ ಹಚ್ಚಿಕೊಳ್ಳುತ್ತಿದ್ದರೆ ತ್ವಚೆ ಮೃದುವಾಗುತ್ತದೆ ಅಲ್ಲದೆ ನಂಜುನಿರೋಧಕ ಶಕ್ತಿ ಪಡೆಯುತ್ತದೆ ಜೊತೆಗೆ ಕಪ್ಪು ಕಲೆ ಹಾಗೂ ನೆರಿಗೆಗಳು ಮಾಯವಾಗುತ್ತದೆ.

9. ಪಪ್ಪಾಯಿ ಕಾಯಿಯ ಸಿಪ್ಪೆಯಿಂದ ನಿಯಮಿತವಾಗಿ ಉಜ್ಜಿಕೊಳ್ಳುತ್ತಿದ್ದರೆ ಮಚ್ಚೆಗಳು ನಿವಾರಣೆಯಾಗುತ್ತದೆ.

10. ಪ್ರತಿದಿನ ಊಟದ ನಂತರ ಸೇಬುಹಣ್ಣನ್ನು ತಿನ್ನುವುದರಿಂದ ಹಲ್ಲುಗಳು ಹೊಳೆಯುತ್ತದೆ.

rockinggirl.mamtha
VIP
VIP

Female
Number of posts: 471
Age: 17
Profession: student
MAJA POINTS MAJA POINTS: 3478
Registration date: 2009-07-03

View user profile

Back to top Go down

Re: Beauty tips for girls

Post by rockinggirl.mamtha on Mon 14 Sep - 12:25:58

ಕೋಮಲ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಿ
ಹೆಣ್ಣಿನ ಸೌಂದರ್ಯದಲ್ಲಿ ಕಲೆರಹಿತ ಕಾಂತಿಯುಕ್ತ ಮುಖವೇ ಪ್ರಧಾನ ಪಾತ್ರ ವಹಿಸುತ್ತದೆ. ತ್ವಚೆ ಮೇಲಿನ ಕಪ್ಪು ಕೆಲೆಗಳು ಮುಖದ ಸೌಂದರ್ಯವನ್ನು ಅಡಗಿಸುತ್ತದೆ.

ಅದಕ್ಕಾಗಿ ನೀವು ಈ ಸಲಹೆಗಳನ್ನು ಪಾಲಿಸಿದ್ದಲ್ಲಿ ಕಪ್ಪು ಕಲೆಗಳು ಮಾಯವಾಗಿ ನಿಮ್ಮ ಮುಖವು ಕಾಂತಿಯುತವಾಗುವುದಲ್ಲಿ ಯಾವುದೆ ಸಂಶಯವಿಲ್ಲ.

1.ಸೌತೆಕಾಯಿಯನ್ನು ಅತಿ ತೆಳುವಾಗಿ ಕತ್ತರಿಸಿ ಅವುಗಳನ್ನು 10 ನಿಮಿಷ ಕಣ್ಣಿನ ರೆಪ್ಪೆ ಮೇಲೆ ಇಟ್ಟುಕೊಂಡರೆ ಕಣ್ಣಿನ ಸುತ್ತಲಿನ ಕಪ್ಪು ವೃತ್ತ ಮಾಯವಾಗುತ್ತದೆ.
2.ಟೊಮ್ಯಾಟೋ ಕತ್ತರಿಸಿ ಪ್ರತಿದಿನ ಮುಖದ ಮೇಲೆ ತಿಕ್ಕುವುದರಿಂದ ತ್ವಚೆಯಲ್ಲಿ ಹೊಳಪು ಉಂಟಾಗುತ್ತದೆ.
3.ಹಾಲಿನ ಕೆನೆಯನ್ನು ಪ್ರತಿನಿತ್ಯ ಮುಖಕ್ಕೆ ಹಚ್ಚಿಕೊಳ್ಳುತ್ತಿದ್ದರೆ ತ್ವಚೆ ಮೃದುವಾಗುತ್ತದೆ ಮತ್ತು ನಂಜುನಿರೋಧಕ ಶಕ್ತಿ ಪಡೆಯುತ್ತದೆ. ಅಲ್ಲದೆ ಕಪ್ಪುಕಲೆ, ನೆರಿಗೆಗಳು ಮಾಯವಾಗುತ್ತವೆ.
4.ಪ್ರತಿದಿನ ಊಟದ ನಂತರ ಸೇಬುಹಣ್ಣನ್ನು ತಿನ್ನುವುದರಿಂದ ಹಲ್ಲುಗಳು ಹೊಳೆಯುತ್ತವೆ.
5.ಪ್ರತಿದಿನ ಹುಬ್ಬಿನ ಮೇಲೆ ಸ್ವಲ್ಪ ಹರಳೆಣ್ಮೆ ಲೇಪಿಸುತ್ತಿದ್ದರೆ ಹುಬ್ಬುಗಳು ಕಪ್ಪಾಗುತ್ತವೆ.
ತಲಾ ಎರಡು ಹನಿ ನಿಂಬೆರಸ, ಜೇನುತುಪ್ಪ, ಗ್ಲಿಸರಿನ್, ಪನ್ನೀರು ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳುತ್ತಿದ್ದರೆ, ತ್ವಚೆ ಬೇಗದ ಸುಕ್ಕುಗಟ್ಟದು.
6.ಮೆಂತ್ಯೆ,ಕಡಲೇಬೇಳೆ, ಹೆಸರುಬೇಳೆ ಇವುಗಳನ್ನು ಸೇರಿಸಿ ಹಿಟ್ಟು ಮಾಡಿಕೊಂಜು, ನಾಲ್ಕು ಚಮಚ ಪನ್ನೀರು ಹಾಗು ಎರಡು ಹಿಟ್ಟು ಬೆರೆಸಿ. ಮುಖಕ್ಕೆ ಲೇಪಿಸಿ 20 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ಮುಖವನ್ನು ಒರೆಸಿಕೊಳ್ಳಿ. ಇದು ಚಳಿಗಾಲಕ್ಕೆ ಉತ್ತಮ ಆರೈಕೆ.
7.ತುಟಿಗಳಿಗೆ ಪ್ರತಿದಿನ ತುಪ್ಪ, ಹರಳೆಣ್ಣೆ ಅಥವಾ ಹಾಲಿನ ಕೆನೆ ಹಚ್ಚಿ ತಿಕ್ಕಿ, ಒಂದು ಗಂಟೆ ಬಿಟ್ಟು ಸೀಗೇಪುಡಿ ಅಥವಾ ಕಡಲೇಹಿಟ್ಟಿನಲ್ಲಿ ತಿಕ್ಕಿ ತೊಳೆಯಿರಿ. ಹೊಳಪುಳ್ಳ ತಿಳಿಗೆಂಪು ತುಟಿ ನಿಮ್ಮದಾಗುತ್ತದೆ.
8.ಪ್ರತಿದಿನ ಸ್ವಲ್ಪ ತುಳಸೀರಸವನ್ನು ಜೇನುತುಪ್ಪದೊಡನೆ ಸೇವಿಸುತ್ತಿದ್ದರೆ, ಮುಖದ ತೇಜಸ್ಸು ಹೆಚ್ಚಿ ನುಖದ ಮೇಲಿನ ಕಲೆಗಳು ಮಾಯವಾಗುತ್ತವೆ.
9.ಕಹಿಬೇವಿನ ಏಳೆಂಟು ಎಲೆಗಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ , ತುಸು ಬೆಚ್ಚಗಿರುವಾಗಲೇ ಮುಖ ತೊಳೆದುಕೊಳ್ಳುತ್ತಿದ್ದರೆ, ಸಿಡಿಬಿನ ಕಲೆಗಳು ಮಾಯವಾಗುತ್ತವೆ.
10.ಹಸಿ ಹಾಲನ್ನು ಮುಖ, ಕೈ, ಕತ್ತು ಮತ್ತು ತಲೆಗೆ ಹಚ್ಚಿಕೊಂಡು, ಅಕ್ಥ ಗಂಟೆ ಬಿಟ್ಟು ಸ್ನಾನ ಮಾಡಿದರೆ ನ್ಯಾಚುರಲ್ ಕಂಡೀಶನರ್‌ನಂತೆ ಕಾರ್ಯ ನಿರ್ವಾಹಿಸುತ್ತದೆ.ಅಲ್ಲದೆ ಮುಖ ಹಾಗೂ ಕೂದಲಿನ ಹೊಳಪನ್ನು ಕಾಯ್ದಿರಿಸಿ ಸೌಂದರ್ಯ ಹೆಚ್ಚಿಸಲು ಸಹಕಾರಿಯಾಗುತ್ತದೆ.
11.ದಾಲ್ಚಿನ್ನಿ ಚುಕ್ಕೆಗಳನ್ನು ಪುಡಿ ಮಾಡಿ ನಿಂಬೆರಸ ಸೇರಿಸಿ ಹಚ್ಚಿಕೊಂಡರೆ ಮೊಡವೆಗಳು ಮಾಯವಾಗುತ್ತವೆ.
12.ಕಡಲೇಹಿಟ್ಟಿಗೆ ಸೌತೇರಸ ಬೆರೆಸಿ, ಮುಖ ಹಾಗೂ ಕತ್ತಿಗೆ ಹಚ್ಚಿಕೊಂಡು, 15 ನಿಮಿಷ ನಂತರ ಮುಖ ತೊಳೆದುಕೊಳ್ಳ. ಪ್ರತಿದಿನ ಈ ರೀತಿ ಮಾಡಿದರೆ, ತ್ವಚೆ ನುಣುಪು ಹಾಗೂ ಕೋಮಲತೆಯನ್ನು ಪಡೆಯುತ್ತದೆ.

rockinggirl.mamtha
VIP
VIP

Female
Number of posts: 471
Age: 17
Profession: student
MAJA POINTS MAJA POINTS: 3478
Registration date: 2009-07-03

View user profile

Back to top Go down

Page 1 of 3 1, 2, 3  Next

View previous topic View next topic Back to top


Permissions of this forum:
You cannot reply to topics in this forum